ಶನಿವಾರ, ಸೆಪ್ಟೆಂಬರ್ 18, 2021
30 °C

ಮಂತ್ರಾಲಯ: ಮೃತ್ತಿಕಾ ಸಂಗ್ರಹಣ ಪೂಜೆ

ರಾಯಚೂರು: ಆಷಾಢ ಶುದ್ಧ ಪೂರ್ಣಿಮೆ ದಿನದಂದು ಶನಿವಾರ, ಮಂತ್ರಾಲಯದಲ್ಲಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೃತ್ತಿಕಾ ಸಂಗ್ರಹಣಾ ವಿಧಿವಿಧಾನಗಳನ್ನು ನೆರವೇರಿಸಿದರು.

ತುಂಗಭದ್ರಾ ನದಿಪಕ್ಕದಲ್ಲಿರುವ ತುಳಸಿವನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಶ್ರೀಗಳು, ತುಳಸಿಗಿಡದ ಕೆಳಗಿನ ಮೃತ್ತಿಕೆಯನ್ನು ಬೆಳ್ಳಿ ಪಾತ್ರೆಯಲ್ಲಿ ಸಂಗ್ರಹಿಸುವ ಕಾರ್ಯ ನೆರವೇರಿಸಿದರು.