ಶುಕ್ರವಾರ, ಮಾರ್ಚ್ 31, 2023
32 °C

Video | ಅಶ್ವಿನಿ ಪುನೀತ್‌ ರಾಜ್‌ಕುಮಾರ್ ನನ್ನ ಶಕ್ತಿ: ಐಶಾನಿ ಶೆಟ್ಟಿ

 

'ಶಾಕುಂತಲೆ ಸಿಕ್ಕಳು ಸುಮ್ ಸಮ್ಮನೆ ನಕ್ಕಳು' ಹಾಡಿನಿಂದಿ ಇಡೀ ರಾಜ್ಯದಾದ್ಯಂತ ಮನೆಮಾತಾದವರು ಐಶಾನಿ ಶೆಟ್ಟ. ಮಾಡಿರುವುದು ಕಡಿಮೆ ಸಿನಿಮಾಗಳು. ಆದರೆ ಅವರು ವಿಶಿಷ್ಠ ನಟನೆಯ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಕೇವಲ ನಟಿಯಾಗಿ ಮಾತ್ರವಲ್ಲ, ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಐಶಾನಿ ಶೆಟ್ಟಿ ನಿರ್ದೇಶಿಸಿದ ಶಾರ್ಟ್‌ ಮೂವಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕತ್ತು. ಇನ್ನು ಅವರು ನಟಿಸಿರುವ 'ಹೊಂದಿಸಿ ಬರೆಯಿರಿ' ಸಿನಿಮಾ ಫೆ.10 ರಂದು ತೆರೆಗೆ ಬರಲಿದೆ. ಹಾಗಾಗಿ ಪ್ರಚಾರ ಕಾರ್ಯಗಳು ಭರದಿಂದ ಸಾಗಿವೆ. 'ಹೊಂದಿಸಿ ಬರೆಯಿರಿ' ಚಿತ್ರದ ಬಗ್ಗೆ, ಅವರ ಪಾತ್ರದ ಬಗ್ಗೆ, ಅವರ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ್ದಾರೆ.