ಗುರುವಾರ , ಅಕ್ಟೋಬರ್ 21, 2021
27 °C

ವಿಡಿಯೊ: ಡ್ರಗ್ಸ್ ಕೇಸ್- ಶಾರುಕ್ ಖಾನ್ ಪುತ್ರ ಆರ್ಯನ್ ಬಂಧನ

ಮುಂಬೈ ಸಮೀಪದ ಕಡಲಿನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಮಾದಕ ಪದಾರ್ಥ ನಿಯಂತ್ರಣ ಬ್ಯೂರೋ(ಎನ್‌ಸಿಬಿ) ಆರ್ಯನ್ ಖಾನ್(23) ಸೇರಿ ನಾಲ್ವರನ್ನು ಬಂಧಿಸಿದ್ದು, ನ್ಯಾಯಾಲಯ ಅವರನ್ನು ಒಂದು ದಿನ ಎನ್‌ಸಿಬಿ ಕಸ್ಟಡಿಗೆ ನೀಡಿದೆ. ‘ಡ್ರಗ್ಸ್ ಪಾರ್ಟಿ ನಡೆದಿದೆ ಎನ್ನಲಾದ ಹಡಗಿನಲ್ಲಿ ಆರ್ಯನ್‌ ಕ್ಯಾಬಿನ್ ಅಥವಾ ಆಸನಕ್ಕಾಗಿ ಯಾವುದೇ ಟಿಕೆಟ್ ಬುಕ್ ಮಾಡಿಲ್ಲ, ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದರಿಂದ ಅಲ್ಲಿಗೆ ಬಂದಿದ್ದರು. ಅವರಿಗೆ ಬೋರ್ಡಿಂಗ್ ಪಾಸ್ ಕೂಡ ಇರಲಿಲ್ಲ. ಚಾಟ್ ಆಧಾರದ ಮೇಲೆ ಮಾತ್ರ ಬಂಧಿಸಲಾಗಿದೆ’ಎಂದು ವಕೀಲರು ವಾದಿಸಿದ್ದಾರೆ.