ಗುರುವಾರ , ಆಗಸ್ಟ್ 5, 2021
22 °C

Watch: ಹಲಸಿನ ಕಾಯಿ ಕಬಾಬ್‌

ಚಿಕನ್‌ ಕಬಾಬ್ ಎಲ್ಲರೂ ಕೇಳಿದ್ದೇವೆ, ಆದರೆ ಹಲಸಿನ ಕಾಯಿ ಕಬಾಬ್‌ ಕೇಳಿದ್ದೀರಾ?

ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿ – ತೊಳೆ ಬಿಡಿಸಿದ್ದು 1 ಕಪ್‌, ಕಡಲೆಹಿಟ್ಟು – 1/4 ಕಪ್‌, ಅಕ್ಕಿಹಿಟ್ಟು – ಮುಕ್ಕಾಲು ಕಪ್‌, ಉಪ್ಪು, ಅರಿಸಿನ ಪುಡಿ – ಚಿಟಿಕೆ, ಖಾರದಪುಡಿ – 2 ಚಮಚ, ಶುಂಠಿ–ಬೆಳ್ಳುಳ್ಳಿ – 1 ಚಮಚ, ಕರಿಬೇವಿನ ಎಲೆ – 10, ನೀರು – ಅಗತ್ಯಕ್ಕೆ ತಕ್ಕಷ್ಟು, ಇಂಗು – ಚಿಟಿಕೆ, ಎಣ್ಣೆ – ಕರಿಯಲು.

ತಯಾರಿಸುವ ವಿಧಾನ: ಬಿಡಿಸಿದ ತೊಳೆಯನ್ನು ಎರಡು ತುಂಡು ಕತ್ತರಿಸಿಕೊಳ್ಳಿ. ಅದಕ್ಕೆ ಅಕ್ಕಿಹಿಟ್ಟು, ಕಡಲೆಹಿಟ್ಟು, ಉಪ್ಪು, ಖಾರದಪುಡಿ, ಅರಿಸಿನ ಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಕರಿಬೇವು, ನೀರು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಚಿಟಿಕೆ ಇಂಗು ಸೇರಿಸಿ. ಎಣ್ಣೆಯಲ್ಲಿ ಬಣ್ಣ ಬದಲಾಗುವವರೆಗೂ ಕಾಯಿಸಿ. ಇದು ಮಳೆಗಾಲದಲ್ಲಿ ತಿನ್ನಲು ಚೆನ್ನಾಗಿರುತ್ತದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...