ಶುಕ್ರವಾರ, ಜುಲೈ 30, 2021
24 °C

Recipe-Egg Special| ಚಪಾತಿ, ರೊಟ್ಟಿ ಜೊತೆ ಮಸ್ತ್ ಕಾಂಬಿನೇಷನ್ ಡಾಬಾ ಶೈಲಿಯ ಎಗ್‌ ಬುರ್ಜಿ‌

ಬೇಕಾಗುವ ಸಾಮಗ್ರಿಗಳು: ಎಣ್ಣೆ – 3 ಚಮಚ, ಹಸಿಮೆಣಸು – 3, ಈರುಳ್ಳಿ – 4 ದೊಡ್ಡದು, ಟೊಮೆಟೊ – 1, ಉಪ್ಪು – ರುಚಿಗೆ, ಅರಿಸಿನ – ಚಿಟಿಕೆ, ಕೊತ್ತಂಬರಿ ಪುಡಿ – 1 ಚಮಚ, ಖಾರದಪುಡಿ – 2 ಚಮಚ, ಗರಂ ಮಸಾಲೆ – ಅವಶ್ಯಕತೆ ಇದ್ದರೆ, ಮೊಟ್ಟೆ – 8 ತಯಾರಿಸುವ

ವಿಧಾನ: ದಪ್ಪ ತಳದ ಪಾತ್ರೆಯೊಂದಕ್ಕೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹಸಿಮೆಣಸು ಹಾಕಿ ಕೈಯಾಡಿಸಿ. ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ ಹಾಕಿ ಈರುಳ್ಳಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಹೆಚ್ಚಿದ ಟೊಮೆಟೊ ಹಾಗೂ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಕೊತ್ತಂಬರಿ ಪುಡಿ ಹಾಗೂ ಅರಿಸಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಾದರೆ ಗರಂ ಮಸಾಲ ಸೇರಿಸಿ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಟೊಮೆಟೊ ಬೇಯುವವರೆಗೂ ಬೇಯಿಸಿಕೊಳ್ಳಿ. ಅಷ್ಟರಲ್ಲಿ ಮೊಟ್ಟೆಯನ್ನು ಚೆನ್ನಾಗಿ ಕಲೆಸಿಕೊಳ್ಳಿ. ಅದನ್ನು ಒಲೆಯ ಮೇಲಿರುವ ಮಿಶ್ರಣಕ್ಕೆ ಸೇರಿಸಿ ಕೊತ್ತಂಬರಿ ಸೊಪ್ಪು ಹಾಕಿ ಒಂದು ನಿಮಿಷ ಹಾಗೇ ಬಿಡಿ. ನಂತರ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಮೊಟ್ಟೆ ಸ್ವಲ್ಪ ಗಟ್ಟಿಯಾದ ಮೇಲೆ ಉದುರುದುರಾಗಿ ಎಗ್‌ ಬುರ್ಜಿ ತಯಾರಾಗುತ್ತದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp