ಸೋಮವಾರ, ಮಾರ್ಚ್ 1, 2021
26 °C

VIDEO| ಮೋದಿ ಇದ್ದ ಕಾರ್ಯಕ್ರಮದಲ್ಲಿ 'ಜೈ ಶ್ರೀರಾಮ್‌' ಘೋಷಣೆ: ಮಾತನಾಡಲು ನಿರಾಕರಿಸಿದ ಮಮತಾ ಬ್ಯಾನರ್ಜಿ

ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ.

ಪ್ರಧಾನಿ ಮೋದಿ ಸಮ್ಮುಖದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಮತಾ ಅವರಿಗೆ ಭಾಷಣ ಮಾಡಲು ಆಹ್ವಾನಿಸಲಾಯಿತು. ಆ ಸಮಯದಲ್ಲಿ 'ಜೈ ಶ್ರೀರಾಮ್‌' ಎಂಬ ಘೋಷಣೆಗಳು ಕೇಳಿಬಂದವು. ಇದಕ್ಕೆ ಆಕ್ರೋಶಗೊಂಡ ಮಮತಾ, 'ಇದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಇದೊಂದು ಸರ್ಕಾರಿ ಕಾರ್ಯಕ್ರಮ. ಇದಕ್ಕೊಂದು ಘನತೆ ಇರಬೇಕು. ಆಹ್ವಾನಿಸುವುದು ಮತ್ತು ಅವಮಾನಿಸುವುದು ಯಾರಿಗೂ ಇಷ್ಟವಾಗುವುದಿಲ್ಲ. ನಾನು ಮಾತನಾಡುವುದಿಲ್ಲ. ಜೈ ಬಂಗಾಳ, ಜೈ ಹಿಂದ್' ಎಂದು ತಮ್ಮ ಭಾಷಣವನ್ನು ನಿಲ್ಲಿಸಿದ್ದಾರೆ.