ಅಕ್ರಮ ಗಣಿಗಾರಿಕೆ ವಿರುದ್ಧದ ನನ್ನ ಹೋರಾಟ ನಿಲ್ಲಲ್ಲ: ಎಚ್‌ಡಿಕೆ ಟ್ವೀಟ್‌ಗೆ ಸುಮಲತಾ ಉತ್ತರ
ಕೆಆರ್‌ಎಸ್ ಅಣೆಕಟ್ಟೆ ಸಮೀಪದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರೊಂದಿಗೆ ನಡೆಸುತ್ತಿದ್ದ ರಾಜಕೀಯ ಕದನಕ್ಕೆ ವಿರಾಮ ಹಾಕಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಅದರಂತೆ ಅವರು, ನಾವು ಹೋರಾಟ ಮಾಡಬೇಕಾದ ವಿಚಾರಗಳು ಬಹಳಷ್ಟಿವೆ. ನಾಡು ನುಡಿಗಾಗಿ ಹೋರಾಡೋಣ, ಬೇರೆಲ್ಲ ವಿಷಯಗಳನ್ನು ಉಪೇಕ್ಷಿಸೋಣ ಎಂದು ಟ್ವಿಟರ್ ಮೂಲಕ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕುಮಾರಸ್ವಾಮಿ ಅವರ ಈ ನಡೆಯ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ನಾಡು ನುಡಿಗಾಗಿ ಹೋರಾಡೋಣ, ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ: ಎಚ್‌ಡಿಕೆ