ಭಾನುವಾರ, ಜನವರಿ 17, 2021
18 °C

ರಾಜಕೀಯ ರಸಪ್ರಸಂಗ 18– ಸದಾನಂದಗೌಡರು ಕೊಟ್ಟ ಗಿಫ್ಟ್‌. . .?

ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದಗೌಡರು 2011–12ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು. ಯಡಿಯೂರಪ್ಪ ರಾಜೀನಾಮೆ ಕೊಟ್ಟ ಕಾಲದಲ್ಲಿ ಆಕಸ್ಮಿಕವೆಂಬಂತೆ ಸದಾನಂದಗೌಡರಿಗೆ ಈ ಹುದ್ದೆ ಒಲಿದುಬಂತು. ಶಾಸಕರನ್ನು ಓಲೈಸಿ ಸರ್ಕಾರ ನಡೆಸುವ ಉಸಾಬರಿಯೂ ಅವರ ಹೆಗಲಿಗೆ ಬಿದ್ದಿತ್ತು. ಮನೆಗೆ ಬಂದ ಶಾಸಕರನ್ನು ನಗುಮುಖದಲ್ಲಿ ಮಾತನಾಡಿಸುತ್ತಾ ಇದ್ದ ಗೌಡರು ಹೋಗುವಾಗ ಕೈಗೊಂದು ಕಾಗದದ ಪೊಟ್ಟಣ ಕೊಡುತ್ತಿದ್ದರು. ‘ಗಿಫ್ಟ್’ ಎಂದು ತಿಳಿದ ಶಾಸಕರು ಅದನ್ನು ತೆಗೆದುಕೊಂಡು ಹೋಗಿ, ಬಿಚ್ಚಿ ನೋಡಿದಾಗ ಅವರಿಗೆ ಅಚ್ಚರಿ ಕಾದಿರುತ್ತಿತ್ತು. ಹಾಗಿದ್ದರೆ ಗೌಡರು ಕೊಡುತ್ತಿದ್ದ ಗಿಫ್ಟ್‌ ಏನು?. ನೋಡಿ ಈ ವಾರದ ರಾಜಕೀಯ ರಸಪ್ರಸಂಗ. . .

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ 

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ 

ಫೇಸ್‌ಬುಕ್‌: ಲೈಕ್ ಮಾಡಿ 

ಟ್ವಿಟರ್‌: ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ