ಬುಧವಾರ, ಜೂನ್ 3, 2020
27 °C

ವಾರ ಭವಿಷ್ಯ | 31-5-2020ರಿಂದ 06-06-2020 ರವರೆಗೆ

ಮೇಷ
ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನಿರೀಕ್ಷಿತ ಮೂಲಗಳಿಂದ ಹಣ ಬರುತ್ತದೆ. ತಾಯಿಯೊಂದಿಗೆ ಸಂಬಂಧ ಸ್ವಲ್ಪ ವ್ಯತ್ಯಾಸವಾಗಬಹುದು. ಕಣ್ಣಿನ ತೊಂದರೆ ಬಗ್ಗೆ ಎಚ್ಚರ ವಹಿಸಿ. ಸರ್ಕಾರದಿಂದ ಅಥವಾ, ಸಂಘ-ಸಂಸ್ಥೆಗಳಿಂದ ಬರಬೇಕಾಗಿದ್ದ ಹಣ ಬರುತ್ತದೆ. ಭೂಮಿ ಅಭಿವೃದ್ಧಿಪಡಿಸಿ ಮಾರುವವರಿಗೆ ಹೆಚ್ಚಿನ ಲಾಭ. ಉದ್ಯೋಗದಲ್ಲಿ ನಿರೀಕ್ಷಿಸಿದ್ದ ಸ್ಥಾನಮಾನ ಸಿಗದಿದ್ದರೂ ಇರುವುದಕ್ಕಿಂತ ಹೆಚ್ಚಿನ ಸ್ಥಾನ ಸಿಕ್ಕು ಮನಸ್ಸಿಗೆ ನಿರಾಳವಾಗುತ್ತದೆ.
ವೃಷಭ
ಈ ಹಿಂದೆ ನಿಮ್ಮ ವಿರುದ್ಧ ನಡೆದುಕೊಂಡಿದ್ದವರು ಪಶ್ಚಾತ್ತಾಪದಿಂದ ಕ್ಷಮೆ ಕೇಳುವರು. ಮಕ್ಕಳಿಂದ ಧನಸಹಾಯ ಇರುತ್ತದೆ, ಹಾಗೂ ಮಕ್ಕಳು ನಿಮ್ಮ ಮಾತನ್ನು ಕೇಳುವರು. ಅನಿರೀಕ್ಷಿತವಾಗಿ ಪಾಲುದಾರಿಕೆ ವ್ಯಾಪಾರ ಒದಗಿ ಬರಬಹುದು ಸರಿಯಾಗಿ ಪರಿಶೀಲಿಸಿ ನಂತರ ತೀರ್ಮಾನಿಸಿರಿ. ಸಾವಯವ ಕೃಷಿ ಬೆಳೆಗಳಿಗೆ ಬೇಡಿಕೆ ಹೆಚ್ಚುವುದು. ಕೃಷಿ ಸಂಶೋಧನೆಗಳನ್ನು ಮಾಡುತ್ತಿರುವವರಿಗೆ ಶಿಷ್ಯವೇತನ ದೊರಕುತ್ತದೆ. ಶಿಕ್ಷಣ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯ ಸಂತೋಷಕ್ಕಾಗಿ ಸ್ವಲ್ಪ ಹಣ ಖರ್ಚಾಗುತ್ತದೆ.
ಮಿಥುನ
ಸ್ವಲ್ಪ ಆಲಸ್ಯದ ನಡವಳಿಕೆ ಇರುತ್ತದೆ. ತಾಯಿಯಿಂದ ಹೆಚ್ಚಿನ ಸೌಕರ್ಯ ಒದಗುತ್ತದೆ. ಸಂಗಾತಿಯ ಕೆಲವು ಕೆಲಸಗಳು ನಿಧಾನವಾಗುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ನೀವು ಅಪೇಕ್ಷಿಸಿದ ಪಾಲು ದೊರೆಯುತ್ತದೆ. ವ್ಯವಹಾರದಲ್ಲಿ ಏರುಪೇರುಗಳು ಸ್ವಲ್ಪ ಸಂದಿಗ್ಧತೆ ತಂದರೂ ನಂತರ ಸರಿಯಾಗುವುದು. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಬದಲಿ ಕೆಲಸದಿಂದ ಸ್ವಲ್ಪ ಹಣ ಸಂಪಾದಿಸಬಹುದು. ಲೇವಾದೇವಿ ವ್ಯವಹಾರವನ್ನು ಮಾಡದಿರುವುದು ಉತ್ತಮ. ವೃತ್ತಿಯಲ್ಲಿ ಬರುವ ಒತ್ತಡಗಳನ್ನು ಸಮಾಧಾನವಾಗಿ ಎದುರಿಸಿರಿ.
ಕಟಕ
ಗಾಯಕರಿಗೆ ಉತ್ತಮ ಸೌಕರ್ಯಗಳು ಒದಗಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವ ಅವಕಾಶ ಒದಗಿಬರುತ್ತದೆ. ದಿನಸಿ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ನಡೆಯುತ್ತದೆ. ಸೌಂದರ್ಯ ಹೆಚ್ಚಿಸುವ ವಸ್ತುಗಳನ್ನು ತಯಾರಿಸುವವರಿಗೆ ಹೊಸ ಹೊಸ ಮಾರುಕಟ್ಟೆ ಸಿಗುತ್ತದೆ. ಭೂಮಿಯ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ ಆಗಬಹುದು. ಗುಪ್ತ ಕಾಯಿಲೆಗಳಿಂದ ನರಳುತ್ತಿರುವವರು ಎಚ್ಚರ ವಹಿಸಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ನಿಂತಿದ್ದ ವಿವಾಹಗಳು ಪುನಹ ನಡೆಯುವ ಸಾಧ್ಯತೆ ಇದೆ.
ಸಿಂಹ
ಈ ವಾರ ಸ್ವಲ್ಪ ಆನಂದದಾಯಕವಾಗಿರುತ್ತದೆ. ವ್ಯವಹಾರದಲ್ಲಿ ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ಹೊಟ್ಟೆಯಲ್ಲಿನ ವಾಯು ಸ್ವಲ್ಪ ತೊಂದರೆ ಮಾಡಬಹುದು. ಮಕ್ಕಳಿಂದ ಸೂಕ್ತ ಸಹಾಯ ದೊರೆಯುವುದು ಸ್ವಲ್ಪ ಕಷ್ಟ. ಸಂಬಂಧಿಗಳ ನಡುವೆ ಬಿಸಿ ವಾತಾವರಣವಿದ್ದರೂ ಕಾರ್ಯಗಳಲ್ಲಿ ಒಟ್ಟುಗೂಡಿ ನಡೆಸುವರು. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಸಹಾಯ ದೊರೆತು ಇದ್ದ ಕಷ್ಟ ನಿವಾರಣೆ ಆಗುತ್ತದೆ. ಇದ್ದ ಆಸ್ತಿಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸಬಹುದು. ಪ್ರಸೂತಿ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯ ಆಸ್ತಿಗೆ ಬೇಡಿಕೆ ಬಂದು ಹೆಚ್ಚು ಬೆಲೆ ಬರುತ್ತದೆ.
ಕನ್ಯಾ
ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದ ಸಂಕೋಲೆಗಳು ಈಗ ಒಂದೊಂದಾಗಿ ಕಳಚಿಕೊಳ್ಳಲು ಶುರುವಾಗುತ್ತವೆ. ಸಿಗಬೇಕಾಗಿದ್ದ ಆಸ್ತಿಗಳ ಬಗ್ಗೆ ಮಾತುಕತೆ ಸ್ವಲ್ಪ ಅಪೂರ್ಣವೆನಿಸುತ್ತದೆ, ಹಿರಿಯರನ್ನು ಬಳಸಿಕೊಂಡು ಇದನ್ನು ಸರಿಪಡಿಸಿಕೊಳ್ಳಬಹುದು. ಮಕ್ಕಳ ವಿದ್ಯಾಭಿವೃದ್ಧಿ ಸ್ವಲ್ಪಮಟ್ಟಿಗೆ ಪರವಾಗಿಲ್ಲ. ಹರಿತವಾದ ಅಥವಾ ಭಾರವಾದ ವಸ್ತುಗಳನ್ನು ಉಪಯೋಗಿಸುವಾಗ ಸ್ವಲ್ಪ ಎಚ್ಚರ ವಹಿಸಿರಿ. ಕೆಲವರಿಗೆ ವಿವಾಹ ಸಂಬಂಧಗಳು ಒದಗಬಹುದು. ಹಣಕಾಸಿನ ಸ್ಥಿತಿಯು ಸಾಮಾನ್ಯವಾಗಿದ್ದು ಯಾವುದೇ ಅಡ್ಡಿ ಆತಂಕಗಳು ಇರುವುದಿಲ್ಲ.
ತುಲಾ
ಭೂಮಿ ಮೇಲೆ ಕೂಡಿದ್ದ ಹಣವು ದುಪ್ಪಟ್ಟಾಗಿ ಬೆಳೆಯುತ್ತದೆ. ಬಂಧುಗಳ ನಡುವಿನ ಮುನಿಸು ಹೆಚ್ಚಾಗಬಹುದು. ಎಲೆಕ್ಟ್ರಾನಿಕ್ ಉಪಕರಣಗಳ ವ್ಯಾಪಾರವು ಸ್ವಲ್ಪ ವೃದ್ದಿಯಾಗುತ್ತದೆ. ಕೃಷಿ ಉಪಕರಣಗಳನ್ನು ತಯಾರಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿಸಿ ಲಾಭ ಬರುತ್ತದೆ. ಸರ್ಕಾರಿ ಮಟ್ಟದ ವ್ಯವಹಾರಗಳಲ್ಲಿ ಮಂದಗತಿ ಇರುತ್ತದೆ. ಹಿರಿಯರ ವ್ಯವಹಾರದಲ್ಲಿ ಪಾಲುದಾರಿಕೆ ದೊರೆಯಬಹುದು. ನೀರಿನ ವ್ಯಾಪಾರ ಮಾಡುವವರಿಗೆ ವ್ಯವಹಾರ ವಿಸ್ತರಣೆಯ ಭಾಗ್ಯ. ನಿಮ್ಮ ಆಲಸ್ಯದಿಂದ ಕೆಲವು ಕೆಲಸಗಳು ನಿಧಾನವಾಗಬಹುದು.
ವೃಶ್ಚಿಕ
ಮಾತಿನಲ್ಲಿ ಸ್ವಲ್ಪ ನಯ ಮತ್ತು ವಿನಯವಿರಲಿ. ಒಡಹುಟ್ಟಿದವರೊಡನೆ ಮುಸುಕಿನ ಗುದ್ದಾಟ ಇದ್ದರೂ ತೊಂದರೆಯೇನಿಲ್ಲ. ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಲಾಭವಿದೆ. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ವಾರ. ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸುತ್ತದೆ. ಸಂಗಾತಿಯಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಸಂಗಾತಿಯ ಧನದಲ್ಲಿ ಸ್ಥಾನಮಾನದಲ್ಲಿ ಏರಿಕೆಯಾಗುತ್ತದೆ. ವಾಹನ ಚಲಾವಣೆಯ ಸಂದರ್ಭದಲ್ಲಿ ಸ್ವಲ್ಪ ಎಚ್ಚರವಹಿಸಿ. ಉದ್ಯೋಗ ಹುಡುಕುತ್ತಿದ್ದವರಿಗೆ ಉದ್ಯೋಗದ ಭರವಸೆ ಸಿಗುತ್ತದೆ.
ಧನು
ಹಣದ ಹರಿವು ಸುಮಾರಾಗಿರುತ್ತದೆ. ಕೆಲಸಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ ಮತ್ತು ಚುರುಕುತನ ಇರುತ್ತದೆ. ಕುಟುಂಬ ಸೌಖ್ಯ ಉತ್ತಮವಾಗಿರುತ್ತದೆ. ಬಂಧುಬಾಂಧವರೊಡನೆ ಸಂಬಂಧ ಉತ್ತಮಗೊಳ್ಳುತ್ತದೆ. ಕ್ರೀಡಾಪಟುಗಳು ಉತ್ತಮ ಸಾಧನೆಯ ಮೂಲಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು. ಸರ್ಕಾರಿ ಸಾಲ ಪಡೆದು ಉಳಿದ ಬಡ್ಡಿ ಸಾಲಗಳನ್ನು ತೀರಿಸಿಕೊಳ್ಳಬಹುದು. ಮಡದಿಯ ಮುನಿಸನ್ನು ಸಮಾಧಾನವಾಗಿ ಪರಿಹರಿಸಿರಿ. ಹಿರಿಯರಿಂದ ಪಶುಸಂಗೋಪನೆ ಬಗ್ಗೆ ಮಾಹಿತಿ ಮತ್ತು ಸಹಾಯ ದೊರೆಯುತ್ತದೆ.
ಮಕರ
ಮಾತು ಒರಟಾಗಿ ವಿವೇಕ ಕೈಕೊಡುವ ಸಂದರ್ಭವಿದೆ. ಬಂಧುಗಳಿಗೆ ಕೊಟ್ಟಿದ್ದ ಸಾಲದ ಹಣವನ್ನು ವಸೂಲಿ ಮಾಡಬಹುದು. ಯಾವುದೇ ಕೆಲಸಗಳಲ್ಲೂ ಆತುರ ಬೇಡ. ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದ ನಿವೇಶನ ಖರೀದಿ ಈಗ ಫಲ ಕೊಡುತ್ತದೆ. ವಿದ್ಯಾರ್ಥಿಗಳಿಗೆ ಸಂತೋಷದಾಯಕ ವಾರ. ಮೂಳೆ ಸಂಬಂಧಿತ ನೋವುಗಳು ಕಾಡಬಹುದು. ಯಾರಿಗೂ ಸಾಲ ಕೊಡುವುದು ಒಳಿತಲ್ಲ. ಹಳೆಯ ಪ್ರೀತಿ ಪ್ರೇಮಗಳು ಪುನಃ ಚಿಗುರೊಡೆದು ಒಂದಾಗಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿ.
ಕುಂಭ
ಸಾಹಸ ಕಲೆಯನ್ನು ಪ್ರದರ್ಶಿಸುವವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಆದಾಯದಷ್ಟೇ ಖರ್ಚು ಇರುತ್ತದೆ. ಹಿರಿಯರ ಆರೋಗ್ಯಕ್ಕಾಗಿ ಹಣ ಖರ್ಚು ಮಾಡುವಿರಿ. ಕುಟುಂಬ ಸೌಖ್ಯದ ಜೊತೆಗೆ ಬಯಸಿದ ವಸ್ತುಗಳನ್ನು ಹೊಂದಬಹುದು. ತಂದೆ ಅಥವಾ ಹಿರಿಯರೊಂದಿಗೆ ಸಂಬಂಧ ಅಷ್ಟಕ್ಕಷ್ಟೇ. ನೀರಿನಿಂದ ಅನಾರೋಗ್ಯದ ಸಂಭವ. ಧಾರ್ಮಿಕ ಸಂಸ್ಥೆಗಳನ್ನು ನಡೆಸುವವರಿಗೆ ದೇಣಿಗೆ ಸಿಗುತ್ತದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಅಭಿವೃದ್ಧಿ ಇದೆ. ನೊಂದ ಜನರ ನೋವಿಗೆ ಮಿಡಿದು ಸಮಾಜಮುಖಿ ಆಗುವಿರಿ. ದಿನಸಿ ವ್ಯಾಪಾರಿಗಳಿಗೆ ಸಾಲ ದೊರೆಯುತ್ತದೆ.
ಮೀನ
ಧನ ಸಂಗ್ರಹ ಹೆಚ್ಚಾಗುವುದು. ಕುಟುಂಬದವರಿಗಾಗಿ ಸ್ವಲ್ಪ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಸ್ವಂತ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ಆಸ್ತಿಯಲ್ಲಿನ ವ್ಯತ್ಯಾಸಗಳು ತಲೆಬಿಸಿ ಮಾಡಬಹುದು. ಮಕ್ಕಳಿಗೆ ಅಥವಾ ತಾಯಿಗೆ ಧನಸಹಾಯ ಮಾಡುವಿರಿ. ಸಂಗಾತಿಯ ವ್ಯವಹಾರವು ಸುಸ್ಥಿತಿಗೆ ಬರುತ್ತದೆ. ಧರ್ಮ ಶಾಲೆಗಳನ್ನು ನಡೆಸುವವರೆಗೆ ಅಗತ್ಯವಿದ್ದಷ್ಟು ಹಣ ದೊರೆಯುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳಿಂದ ಇದ್ದ ತೊಂದರೆ ಬಗೆಹರಿಯುತ್ತದೆ. ಪ್ರವಾಸ ಕಾಲದಲ್ಲಿ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ.