ಮೆಟ್ಟಿಲು ಹತ್ತುತ್ತಿದ್ದ ಮೇಧಾಳಿಗೆ ಎದುರು ಸಿಕ್ಕ ಮಾನಸಿ ‘ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕಿತ್ತು ಅಕ್ಕ’ ಎಂದಳು. ಮೇಧಾ ನೀಡುವ ಕೌಟುಂಬಿಕ ಸಲಹೆಗಳಿಗಾಗಿ ಅಪಾರ್ಟ್ಮೆಂಟಿನ ಹಲವರು ಆಗಾಗ ಹೀಗೆ ಎಡತಾಕುತ್ತಾರೆ. ಮೇಧಾ ನಗುತ್ತಾ ‘ಅದಕ್ಕೇನು, ಬಾ’ ಎಂದು ತನ್ನ ಮನೆಗೆ ಕರೆದೊಯ್ದಳು.

ಕಾಫಿ ಹೀರುತ್ತಾ ‘ಅಕ್ಕ ನಮ್ಮನೇನಲ್ಲಿ ನಂಗೆ ಮದುವೆ ಮಾಡೋಕ್ಕೆ ಪ್ಲ್ಯಾನ್ ಮಾಡ್ತಿದ್ದಾರೆ. ನಂಗೆ ಆಗಾಗ ಟೂರ್ ಮಾಡೊ ಅಭ್ಯಾಸ. ಮದುವೆ ಆದ್ರೆ ಅದೆಲ್ಲಾ ತಪ್ಪಿಹೋಗುತ್ತೆ ಅನ್ನೋ ಭಯ’ ಅಂದಳು ಮಾನಸಿ. ಒಂದಷ್ಟು ಹೊತ್ತು ಯೋಚಿಸಿದ ಮೇಧಾ ‘ಟೂರ್ ಹೋಗ್ಲೇಬೇಕು ಅಂತ ಏನಿದೆ? ಜೀವನವನ್ನು ಬಂದ ಹಾಗೆ ಸ್ವೀಕರಿಸೋದನ್ನ ಕಲೀಬೇಕು. ನಿನ್ನ ಮದುವೆಯಾಗೋ ಹುಡುಗನಿಗೂ ನಿನ್ನ ಹಾಗೆ ಬಿಡೋಕ್ಕೇ ಆಗಲ್ಲ ಅನ್ನೋ ಯಾವುದೋ ಅಭ್ಯಾಸ ಇದ್ರೆ ಏನು ಮಾಡ್ತೀಯ?’ ಎಂದು ಪ್ರಶ್ನಿಸಿದಳು.

ಮಾನಸಿ ಕಣ್ಣು ದೊಡ್ಡದು ಮಾಡಿ ‘ಹೌದಲ್ವಾ ಅಕ್ಕ, ಏನು ಮಾಡಲಿ ನೀವೇ ಸಲಹೆ ಕೊಡಿ’ ಅಂದಾಗ ‘ಹುಡುಗನ ಮನೆಯವರಿಗೆ ನಿನ್ನ ಈ ಆಸೆಯನ್ನು ಮುಚ್ಚಿಡದೇ ಮನಬಿಚ್ಚಿ ಹೇಳು. ಒಪ್ಪಿದರೆ ಮುಂದುವರಿಯುತ್ತಾರೆ, ಇಲ್ಲದಿದ್ದರೆ ಇಲ್ಲ. ಆಮೇಲೆ ನೋಡ್ಕೊಳ್ಳೋಣ ಅಂತ ಅಮೂಲ್ಯವಾದ ಜೀವನವನ್ನ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಡ. ಹ್ಞಾಂ, ಹುಡುಗನಿಗೂ ಆ ತರಹದ ಆಸೆಗಳು ಏನಾದರೂ ಇವೆಯಾ ಅಂತ ಕೇಳುವುದನ್ನು ಮಾತ್ರ ಮರೀಬೇಡ’ ಅಂದಾಗ ಮಾನಸಿಗೆ ಸಮಾಧಾನವಾಯಿತು.

ಮದುವೆಯ ನಂತರ ಹುಡುಗಿಯು ಹುಡುಗನ ಮನೆಗೆ ಹೋಗುವುದು ಭಾರತೀಯ ಸಂಸ್ಕೃತಿ. ಹಾಗಾಗಿ, ಯುವಜೋಡಿ ಈಗಿನ ಪೀಳಿಗೆಯದಾದರೂ ಭಾಗಶಃ ಹುಡುಗನನ್ನು ಬೆಳೆಸಿರುವವರು ಸ್ವಲ್ಪ ಹಿಂದಿನ ಪೀಳಿಗೆಯವರು ಎನ್ನುವುದು ನೆನಪಿನಲ್ಲಿ ಇರಲಿ. ತಮಗೆ ಸರಿ ಅನ್ನಿಸುವ ಕೆಲ ಹವ್ಯಾಸಗಳು ತಾವು ಹೊಕ್ಕ ಮನೆಯವರಿಗೂ ಇಷ್ಟವಾಗುತ್ತ
ವೆಯೋ ಇಲ್ಲವೋ ಎಂದು ಯೋಚಿಸುವುದು ಒಳ್ಳೆಯದು. ಹುಡುಗ, ಹುಡುಗಿ ಕೂಡ ಇಂತಹ ಅಭ್ಯಾಸಗಳ ಬಗ್ಗೆ ಮದುವೆಗೆ ಮೊದಲೇ ಪರಸ್ಪರ ಮಾತನಾಡಿಕೊಂಡರೆ ವಿಚ್ಛೇದನಗಳ ಸಂಖ್ಯೆ ತಗ್ಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.