ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮನೆಯಲ್ಲಿ ಪತಿರಾಯರ ಸಾಥ್‌

Last Updated 7 ಜೂನ್ 2019, 19:30 IST
ಅಕ್ಷರ ಗಾತ್ರ

ಮನೆಗೆಲಸ ‘ಅವಳಿಗಷ್ಟೇ ಸೀಮಿತವಲ್ಲ’ ಎಂಬ ವಾದ ನನ್ನ ಪತಿರಾಯರದ್ದು. ನನಗಿಂತ ಈ ವಿಷಯದಲ್ಲಿ ನನ್ನ ಪತಿ ತುಂಬಾನೇ ಬೆಂಬಲ ಕೊಡ್ತಾರೆ. ‘ನಿನ್ನ ಜೊತೆ ನಾನೂ ಮನೆಕೆಲಸ ಮಾಡಿದ್ರೆ ತಪ್ಪೇನು?’ ಅಂತಾರೆ. ಹೆಚ್ಚಾಗಿ ಅವ್ರು ನಂಗೆ ಅಡುಗೆಮನೆ ಕೆಲಸದಲ್ಲಿ ಕೈ ಜೋಡಿಸ್ತಾರೆ. ಇನ್ನು ಮನೆ ಕ್ಲೀನಿಂಗ್‍ನಲ್ಲೂ ಸಹಾಯ ಮಾಡುತ್ತಾರೆ. ಆಚೆ ಆಫೀಸ್‍ನಲ್ಲೂ ಕೆಲಸ ಮಾಡಿ ಸುಸ್ತಾಗಿ ಬಂದಿರ್ತಾರೆ. ಬೇಡ ಅಂದ್ರೂ ಸಂಜೆ ನಂಗೆ ಅಡುಗೆ ಮಾಡೋಕೆ ಸಹಾಯ ಮಾಡ್ತಾರೆ.

ನಾವು ಮದುವೆಯಾಗಿ ಮೂರು ತಿಂಗಳಾಯಿತಷ್ಟೆ. ನಮ್ಮೆಜಮಾನ್ರು ಡಿಫೆನ್ಸ್(ಮಿಲಿಟರಿ)ನಲ್ಲಿ ಇರೋದ್ರಿಂದ ನಾವಿಬ್ಬರೂ ಈಗ ಪಂಜಾಬ್‍ನಲ್ಲಿ ವಾಸವಾಗಿದ್ದೇವೆ. ಇಬ್ಬರೇ ಇರುವ ಮನೆಯಲ್ಲಿ ಎಷ್ಟು ಅಂತ ಕೆಲಸ ಇರುತ್ತೆ ಹೇಳಿ. ಇನ್ನು ನಾನೇನು ಕೆಲಸಕ್ಕೆಂದು ಹೊರಗಡೆ ಹೋಗೋಳಲ್ಲ. ಮನೆಕೆಲಸ ನಾನೇ ಆರಾಮಾಗಿ ಮಾಡ್ತೀನಿ ಅಂದ್ರೆ ಕೇಳೋದಿಲ್ಲ. ‘ನಾನೂ ನಿಂಗೆ ಹೆಲ್ಪ್ ಮಾಡ್ತೀನಿ’ ಅಂತ ಕೆಲಸಕ್ಕೆ ನಿಂತೇ ಬಿಡ್ತಾರೆ. ಅವ್ರು ಹೇಳ್ತಾರೆ ‘ನಿಂಗೆ ಮನೆಕೆಲಸದಲ್ಲಿ ಸಹಾಯ ಮಾಡೋದ್ರಲ್ಲಿ ಖುಷಿಯಿದೆ’ ಎಂದು. ಅವ್ರ ಖುಷಿಗೆ ನಾನು ಸೈ ಅಂತಿನಿ. ಹಾಗಂತ ನಾನೇನು ಅವ್ರ ಈ ಒಳ್ಳೆತನವನ್ನು ಮಿಸ್‍ಯೂಸ್ ಮಾಡಿಕೊಳ್ಳೋದಿಲ್ಲ.

ಅವ್ರು ನನ್ನನ್ನು ಎಂದೂ ನಾನು ಮನೆಗೆಲಸಕ್ಕೇ ಸೀಮಿತ ಎಂದು ನೋಡಲಿಲ್ಲ. ನಮ್ಮ ಮನೆಯಲ್ಲಿ ಓಪನ್ ಕಿಚನ್ ಇದ್ದು, ಜೋರಾಗಿ ಮ್ಯೂಸಿಕ್ ಹಾಕಿ, ಮ್ಯೂಸಿಕ್ ಕೇಳ್ತಾ ಅಥವಾ ಕ್ರಿಕೆಟ್ ನೋಡ್ತಾ ಅಡುಗೆ ಮಾಡ್ತೀವಿ. ಅವ್ರು ತರಕಾರಿ ಕಟ್‍ ಮಾಡಿದ್ರೆ ನಾನು ಒಗ್ಗರಣೆ ಹಾಕ್ತೀನಿ. ನಾನು ಚಪಾತಿ ಲಟ್ಟಿಸಿದರೆ ಅವ್ರು ಬೇಯಿಸ್ತಾರೆ. ಅವ್ರು ಗ್ರೀನ್‍ ಟೀ ಅಷ್ಟೇ ಕುಡಿಯೋದು, ನಾನು ಅವ್ರಿಗೆ ಗ್ರೀನ್‍ ಟೀ ಮಾಡಿಕೊಡ್ತೀನಿ. ಆದ್ರೆ ಅವ್ರು ನಂಗೆ ಹಾಲಿನ ಟೀ ಮಾಡಿಕೊಡ್ತಾರೆ. ಇನ್ನು ಮನೆ ಸ್ವಚ್ಛವಾಗಿಡೋದ್ರಲ್ಲಿ ನನಗಿಂತ ಒಂದು ಕೈ ಮುಂದೆ ಅವ್ರು. ಮನೆಯನ್ನು ಚೊಕ್ಕವಾಗಿರಿಸಿ, ಇಟ್ಟ ವಸ್ತು ಇದ್ದಲ್ಲೇ ಇರಬೇಕು ಅಂತ ಶಿಸ್ತು ಬಯಸುತ್ತಾರೆ. ಇನ್ನು ನಾನು ತವರು ಮನೆಗೆ ಹೋದ್ರೆ ಆಚೆ ಹೋಟೆಲ್‍ಗೆ ಹೋಗದೆ ಮನೆಯಲ್ಲಿಯೇ ಅಡುಗೆ ಮಾಡ್ಕೋತಾರೆ. ನಾನಿಲ್ಲದಿದ್ದಾಗಲೂ ಮನೆ ಚೊಕ್ಕವಾಗಿ ಇರಿಸುತ್ತಾರೆ. ಒಟ್ಟಾರೆ ನಮ್ಮ ಮನೆಯಲ್ಲೂ ‘ಮನೆಗೆಲಸ ನನಗಷ್ಟೇ ಸೀಮಿತವಲ್ಲ’ ಅನ್ನೋ ‘ಅಚ್ಛೇ ದಿನ್‌’ ಸದ್ಯಕ್ಕಂತೂ ಇದೆ.

–ಸೀಮಾ ಕಾರಟಗಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT