ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಕೇಂದ್ರದಿಂದ 12 ಕಿ.ಮೀ. ಅಂತರದಲ್ಲಿ ಕೇರಳದ ಗಡಿಯಲ್ಲಿರುವ ಗ್ರಾಮ ಕೋಲ್ಚಾರು. ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ 6.20 ಎಕರೆ ಜಾಗದಲ್ಲಿ ಹರಡಿಕೊಂಡಿದೆ. ಈ ಶಾಲೆಯ ಶಿಕ್ಷಕಿ ಜಲಜಾಕ್ಷಿ ಕೆ.ಡಿ..

ಸಕಲ ಸೌಕರ್ಯಗಳನ್ನು ಹೊಂದಿ ಖಾಸಗಿ ಶಾಲೆಗಳನ್ನು ಮೀರಿಸುವಂತಿರುವ ಈ ಸರ್ಕಾರಿ ಸ್ಕೂಲ್ಗೆ ಸುಳ್ಯದಿಂದ ಬರಲು ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇರಲಿಲ್ಲ. ಶಾಲೆಯಿಂದಲೇ ವಾಹನ ಸೌಲಭ್ಯ ಕಲ್ಪಿಸುವ ಯೋಜನೆ ಹಾಕಿಕೊಂಡಾಗ, ಈ ವ್ಯಾನ್ ಓಡಿಸಲು ಮುಂದೆ ಬಂದವರು ಜಲಜಾಕ್ಷಿ ಟೀಚರ್.

ಈಗ, ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ವ್ಯಾನ್ನಲ್ಲಿ ಬರುವ ಮಕ್ಕಳೂ ಸಂತಸಗೊಂಡಿದ್ದಾರೆ. ಜಲಜಾಕ್ಷಿಯವರ ಸ್ಫೂರ್ತಿದಾಯಕ ಕಥನ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.