ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Womens Day | ಕಂಫರ್ಟ್ ಜೋನ್‌ನಿಂದ ಹೊರಬನ್ನಿ...

Last Updated 7 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಸಾಧನೆಯ ಹಾದಿ ಮಹಿಳೆಯರಿಗೆ ಸಹಜ, ಸರಳವಾಗಿರುವುದೇ ಇಲ್ಲ. ಸಾಮಾಜಿಕ ಸಿದ್ಧಚೌಕಟ್ಟನ್ನು ಮೀರುತ್ತ ತಮ್ಮದೊಂದು ಅಸ್ಮಿತೆಯನ್ನು ಸ್ಥಾಪಿಸಬೇಕಾಗುತ್ತದೆ. ಅವಳಿ ದೋಣಿಗಳಲ್ಲಿ ಯಾನ ಮಾಡಿದಂತೆ ಈ ಮಾರ್ಗ ಕಸರತ್ತಿನಿಂದ ಕೂಡಿರುತ್ತದೆ. ಸಮತೋಲನ ತಪ್ಪಿದರೆ ತಾನು ಕಳೆದುಹೋಗುವುದಲ್ಲದೇ ತನ್ನವರನ್ನೂ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಂಥ ಸಂದರ್ಭಗಳಲ್ಲಿಯೂ ತನ್ನ ಹೃದಯದ ಮಾತನ್ನು ಕೇಳುತ್ತ, ತಾನೂ ಬೆಳೆದು, ಉಳಿದವರಿಗೂ ಬೆಳೆಯುವ ಅವಕಾಶ ಮಾಡಿಕೊಟ್ಟ ಹಲವಾರು ಉದಾಹರಣೆಗಳು ನಮ್ಮಲ್ಲಿವೆ. ಸಾಧನೆಯ ಕನಸುಗಳಿಗೆ ಪ್ರೋತ್ಸಾಹ ನೀಡುತ್ತ, ಸಮಾನತೆಗಿಂತಲೂ ಹೆಚ್ಚಾಗಿ ಅವಶ್ಯವಿದ್ದಷ್ಟು ಕಸುವು ತುಂಬುವ ಕೆಲಸ ಅವಕಾಶಗಳನ್ನು ನೀಡುತ್ತ, ಪ್ರೋತ್ಸಾಹಿಸುತ್ತ, ಸಹಭಾಗಿತ್ವವನ್ನು ನೀಡುತ್ತ ಹೋಗಬೇಕಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವೂ ಪೂರಕವಾಗಿ ನಿಲ್ಲಲಿದೆ. ಲಿಂಗ ತಾರತಮ್ಯ ತಡೆಯುವುದೇ ಈ ವರ್ಷದ ಆಶಯ.

**

ಮೊದಲು ನಾವು ಕಂಫರ್ಟ್ ಜೋನ್‌ನಿಂದ ಹೊರಬಂದು ನಮಗಿಷ್ಟವಾಗುವ ಕೆಲಸ ಮಾಡಬೇಕು. ಆಗಲೇ ನಮ್ಮ ನಿಜವಾದ ಸಾಮರ್ಥ್ಯದ ಅರಿವಾಗುವುದು. ನಾನೂ ಅಂಥ ಕಂಫರ್ಟ್ ಜೋನ್‌ನಿಂದ ಹೊರಬಂದೇ ಶ್ರಮಪಟ್ಟು ನನ್ನದೇ ಆದ ಐಡೆಂಟಿಟಿಯನ್ನು ಸಂಪಾದಿಸಿಕೊಂಡಿದ್ದೇನೆ. ಅದರಲ್ಲಿ ಕ್ರಿಯೇಟಿವ್‌ ಆಗಿ ತೊಡಗಿಕೊಂಡಿದ್ದೇನೆ.

ನನ್ನ ಮಗಳು ಹುಟ್ಟಿದ ಬಳಿಕವೇ ರೀಲ್ಸ್ ಮಾಡಲು ಶುರುಮಾಡಿದ್ದು. 2018ರಿಂದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದೆ. ಅದಕ್ಕೂ ಹಿಂದೆ ರೇಡಿಯೊದಲ್ಲಿ ಆರ್.ಜೆ ಆಗಿದ್ದೆ. ಹೆರಿಗೆ ಆದ ಬಳಿಕ ಆರ್‌.ಜೆ ಕೆಲಸ ಮಾಡಲಾಗಲಿಲ್ಲ. ಅಷ್ಟೊತ್ತಿಗೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನರಿಗೆ ಪರಿಚಿತವಾಗಿದ್ದೆ. ಆದರೂ ನನ್ನ ಲೈವ್ ಷೋಗೆ ಜನರು ಟಿಕೆಟ್ ಬುಕ್ ಮಾಡಿಕೊಳ್ಳಬೇಕೆಂದರೆ ನಾನೇ ಮಾರ್ಕೆಟಿಂಗ್ ಮಾಡಿಕೊಳ್ಳಬೇಕಿತ್ತು. ಆಗ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಶುರುಮಾಡಿದೆ.

ಸರಿ ಹೋಗದಿದ್ದರೂ ನಮಗೆ ಹೊಂದಾಣಿಕೆ (ಕಾಂಪ್ರೊಮೈಸ್) ಮಾಡಿಕೊಳ್ಳುವುದು ರೂಢಿಯಾಗಿದೆ. ಆದರೆ, ಎಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಅನ್ನೋದು ನಮ್ಮ ನಿರ್ಧಾರವಾಗಿರಬೇಕು. ಕುಟುಂಬದಲ್ಲಿ ಎಲ್ಲವನ್ನೂ ಸರಿದೂಗಿಸಲು ಹೊಂದಾಣಿಕೆ ಮಾಡಿಕೊಳ್ಳುವುದೇನೋ ಸರಿ. ಹಾಗಂತ ಉದ್ಯೋಗ ಸೇರಿದಂತೆ ಇತರೆಡೆ ಅಂದರೆ ನೀವಿರುವ ಕಡೆ ನಿಮಗೆ ಗೌರವ ಸಿಕ್ಕಿಲ್ಲವಾದರೆ, ಅಲ್ಲೆಲ್ಲೋ ರಾಜಕಾರಣ ನಡೆಯುತ್ತಿದೆ ಎಂದರೆ ಖಂಡಿತಾ ಅಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿಲ್ಲ. ಪದೇ ಪದೇ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವಂಥ ಸನ್ನಿವೇಶ ಎದುರಾದರೆ, ನೀವು ಏನನ್ನೂ ಮಾಡಲಾಗದ ಸ್ಥಿತಿಗೆ ತಲುಪುವ ಸ್ಥಿತಿ ನಿರ್ಮಾಣವಾಗುತ್ತೆ ಅಂದರೆ ಅಲ್ಲಿರಬಾರದು. ಅದನ್ನರಿತೇ ಉದ್ಯೋಗ ತೊರೆದು, ನನಗಿಷ್ಟವಾದ ಕೆಲಸದಲ್ಲಿ ತೊಡಗಿಕೊಂಡೆ.

ಹೆಣ್ಣುಮಕ್ಕಳಿಗೆ ನನ್ನ ಕಿವಿಮಾತೇನೆಂದರೆ, ಎಲ್ಲರಿಗೂ ಇಷ್ಟವಾಗುವಂಥದ್ದನ್ನೇ ನೀವು ಮಾಡಬೇಕು ಅಂದುಕೊಳ್ಳಬೇಡಿ. ನಿಮ್ಮ ಇಷ್ಟ, ಆಸಕ್ತಿಗೆ ತಕ್ಕಂತೆ ಕ್ರಿಯೇಟಿವ್ ಆಗಿ ತೊಡಗಿಕೊಳ್ಳಿ. ವಾರದಲ್ಲಿ ಕನಿಷ್ಠ ಎರಡು ಮೂರು ತಾಸುಗಳನ್ನು ಅದಕ್ಕೆ ಮೀಸಲಿಡಿ. ಅದರಿಂದ ಪ್ರತಿಫಲ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಿಮ್ಮಲ್ಲೊಂದು ಕೌಶಲ ಖಂಡಿತ ಬೆಳೆಯುತ್ತದೆ.

–ನಿರೂಪಣೆ: ಮಂಜುಶ್ರೀ ಎಂ. ಕಡಕೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT