ಇಂದು ಜಗತ್ತಿನಲ್ಲಿ ಹೆಚ್ಚು ಮಹಿಳಾ ನಾಯಕತ್ವವು ಅವಶ್ಯಕವಾಗಿದೆ. ಸಂಘರ್ಷವಿರುವ ಕಡೆಗಳಲ್ಲಿ ಶಾಂತಿಯನ್ನು ತರುವಂತಹ ನಾಯಕತ್ವ, ವಿಭಜನೆಯಿರುವ ಕಡೆಗಳಲ್ಲಿ ಪ್ರೇಮವನ್ನು ತರುವಂತಹ ನಾಯಕತ್ವ, ಗೊಂದಲ ಇರುವ ಕಡೆಯಲ್ಲಿ ಜ್ಞಾನವನ್ನು ತರುವಂತಹ ನಾಯಕತ್ವ. ಹೆಚ್ಚು ಮಹಿಳೆಯರು ಈ ಜಗತ್ತಿನ ನಾಯಕತ್ವವನ್ನು ವಹಿಸಿದ್ದರೆ ಬಹುಶಃ ಕಡಿಮೆ ಸಂಘರ್ಷಗಳು ಇರುತ್ತಿದ್ದವೇನೋ! ಯುದ್ಧಗಳು ನಿಂತು ದೀರ್ಘಕಾಲದ ಹಿಂಸೆಯೆಲ್ಲವೂ ನಿಂತು ಹೋಗುತ್ತಿತ್ತೇನೋ! ಮಹಿಳೆಯರು ಯಾವುದೇ ಸಮಾಜದ ಬೆನ್ನೆಲುಬು. ಒಂದು ಸಮಾಜವು ಬಲಿಷ್ಠವಾಗಿದೆಯೇ ಇಲ್ಲವೇ, ಸಾಮರಸ್ಯದಿಂದಿದೆಯೇ ಇಲ್ಲವೇ ಎನ್ನುವುದು, ಆ ಸಮಾಜದಲ್ಲಿ ಮಹಿಳೆಯು ವಹಿಸುವ ಪಾತ್ರದ ಮೇಲೆ ಅವಲಂಬಿಸಿರುತ್ತದೆ. ಭ್ರಷ್ಟ-ಮುಕ್ತ ಸಮಾಜವನ್ನು ನಾವು ಬಯಸಿದ್ದಲ್ಲಿ, ಮಹಿಳೆಯರಿಗೆ ಗೌರವವನ್ನು, ಪ್ರಾಮುಖ್ಯತೆಯನ್ನು ನೀಡುವಂತಹ ವಾತಾವರಣವನ್ನು ಸೃಷ್ಟಿಸಿದಾಗ ಅದು ಸಾಧ್ಯವಾಗುತ್ತದೆ.

ಮಹಿಳೆಯರು ಭಾವನಾತ್ಮಕರು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಇದು ನಿಜವೇ ಮತ್ತು ಅದೇ ಮಹಿಳೆಯರ ಅತೀ ದೊಡ್ಡ ಶಕ್ತಿಯೂ ಹೌದು! ಈ ಭಾವನಾತ್ಮಕ ಶಕ್ತಿಯಿಂದಾಗಿ ಮಹಿಳೆಯರು ಜನರನ್ನು ಒಗ್ಗೂಡಿಸುತ್ತಾರೆ, ಗಾಯಗಳನ್ನು ಗುಣಮುಖಗೊಳಿಸುತ್ತಾರೆ, ಹಿಂದೆಂದೂ ಇರದ ಸೇತುವೆಗಳನ್ನು ನಿರ್ಮಿಸುತ್ತಾರೆ. ಅದೇ ಸಮಯದಲ್ಲಿ ಮಹಿಳೆಯರು ಅಪ್ರತಿಮ ಬುದ್ಧಿಶಾಲಿಗಳೂ ಹೌದು ಮತ್ತು ನಿಯೋಜಿಸುವಲ್ಲಿ, ಕಾರ್ಯರೂಪಕ್ಕೆ ತರುವಲ್ಲಿ, ನಾಯಕತ್ವವನ್ನು ವಹಿಸುವುದರಲ್ಲಿ ಮಿಂಚುತ್ತಾರೆ. ಮಹಿಳೆಯರ ಮುಂದಾಳುತ್ವದಲ್ಲಿ ನಡೆಸಲಾಗುವ ಯಾವುದೇ ವಿಭಾಗವು ತರ್ಕ ಮತ್ತು ಸಂವೇದನೆಯ ಮಿಶ್ರಣದಿಂದ ಕೂಡಿದ್ದು, ಉಳಿದವುಗಳಿಗಿಂತ ಮುಂದಿರುತ್ತದೆ ಹಾಗೂ ಅಭಿವೃದ್ಧಿ ಹೊಂದುತ್ತದೆ.

ಓರ್ವ ಮಹಿಳೆಯು ಜವಾಬ್ದಾರಿಯನ್ನು ವಹಿಸಿಕೊಂಡಾಗ, ಅದನ್ನು ತನ್ನ ಹೃದಯದಿಂದ, ಬುದ್ಧಿಯಿಂದ ಮಾಡುತ್ತಾಳೆ. ಆದ್ದರಿಂದಲೇ ಒಂದು ಕುಟುಂಬದಲ್ಲಿ ಏನಾದರೂ ಭಿನ್ನಾಭಿಪ್ರಾಯಗಳಿದ್ದಲ್ಲಿ, ಅವುಗಳನ್ನು ನಿವಾರಿಸುವ ದಾರಿಯನ್ನು ಮಹಿಳೆಯು ಕಂಡುಕೊಳ್ಳುತ್ತಾಳೆ. ಗೊಂದಲಗಳಿದ್ದರೆ ಸಾಮರಸ್ಯವನ್ನು ತರುತ್ತಾಳೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಜಗತ್ತಿಗೆ ಗುಣಮುಖಗೊಳಿಸುವ, ಒಗ್ಗೂಡಿಸುವ ಈ ಸಾಮರ್ಥ್ಯವು ಹೇರಳವಾಗಿ ಬೇಕಿದೆ.

ಜೀವನವನ್ನು ವಿಶಾಲವಾದ ದೃಷ್ಟಿಕೋನದಿಂದ ಕಾಣುವುದು

ಓರ್ವ ಮಹಿಳೆಯ ಶಕ್ತಿಯು, ಕಾಲ ಮತ್ತು ಸ್ಥಾನದ ವಿಶಾಲವಾದ ದೃಷ್ಟಿಕೋನದಲ್ಲಿ ಜೀವನವನ್ನು ನೋಡುವ ಅವಳ ಸಾಮರ್ಥ್ಯದಲ್ಲಿದೆ. ಇದರಿಂದ ಯಾವುದು ತಾತ್ಕಾಲಿಕ, ಯಾವುದು ಶಾಶ್ವತ ಎಂದು ತಿಳಿಯಲು ಸಾಧ್ಯವಾಗುತ್ತದೆ. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ - ನಮ್ಮ ಆಲೋಚನೆಗಳು, ನಮ್ಮ ಭಾವನೆಗಳು, ಅಷ್ಟೇ ಏಕೆ? ನಮ್ಮ ದೇಹವೂ ಶಾಶ್ವತವಲ್ಲ. ಆದರೆ ನಮ್ಮ ಅಂತರಾಳದಲ್ಲಿರುವ ಯಾವುದೋ ಒಂದು ಎಂದಿಗೂ ಬದಲಿಸುವುದಿಲ್ಲ. ಅನಂತವಾಗಿರುವ ಅದನ್ನು ಬಿಗಿಯಾಗಿ ಹಿಡಿದುಕೊಂಡಾಗ ಅಚಲವಾದ ಶಕ್ತಿ ಬರುತ್ತದೆ. ಆದ್ದರಿಂದಲೇ ಆಧ್ಯಾತ್ಮಿಕತೆಯು ಅಷ್ಟು ಅವಶ್ಯಕ - ಅದು ಮನಸ್ಸಿಗೆ ಆಧಾರವಾದಾಗ ಯಾವ ಹಿನ್ನಡೆಯೂ ಇರುವುದಿಲ್ಲ, ಯಾವ ಬಾಹ್ಯದ ಘಟನೆಗೂ ಸಹ ನಿಮ್ಮ ಮುಗುಳ್ನಗೆಯನ್ನು ಕಸಿದುಕೊಳ್ಳಲು ಸಾಧ್ಯವಾಗುವುದಿಲ್ಲ.

ಚಿಂತೆ ಉದ್ಭವಿಸಿದಾಗಲೆಲ್ಲಾ ಒಂದು ಹೆಜ್ಜೆ ಹಿಂದಿಟ್ಟು, "ಹಿಂದೆಯೂ ನನಗೆ ಚಿಂತೆಯಿತ್ತು, ಅಲ್ಲವೆ? ಆದರೂ ಪ್ರತಿಸಲವೂ ಹೇಗೋ ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲವೂ ಸರಿಹೋಯಿತು" ಎಂದು ಆಲೋಚಿಸಿದಾಗ, ಈ ಅರಿವಿನಿಂದ ನಿಮ್ಮೊಳಗೆ ಒಂದು ಆಂತರಿಕವಾದ ಶಕ್ತಿ; ಬಲವೆದ್ದು, ಜೀವನದ ಯಾವುದೇ ಸವಾಲುಗಳನ್ನು ನಿಭಾಯಿಸಬಲ್ಲಿರಿ.

ಮಹಿಳಾ ನಾಯಕತ್ವದ ಬಲ

ಭಾರತೀಯ ಶಾಸ್ತ್ರಗಳು ಸ್ತ್ರೀ ಶಕ್ತಿಯ ಬಗ್ಗೆ ಬಹಳ ಪ್ರಾಮುಖ್ಯತೆಯನ್ನು ನೀಡಿವೆ. ಇಡೀ ಸೃಷ್ಟಿಯ ಹಿಂದಿರುವ ಪ್ರಾಣಶಕ್ತಿಯು ಆದಿಶಕ್ತಿ, ಸ್ತ್ರೀ ಶಕ್ತಿ. ಜೀವನದ ಅತ್ಯಾವಶ್ಯಕವಾದ ಮಂತ್ರಾಲಯಗಳನ್ನು ಆಳುತ್ತಿರುವುದು ಸ್ತ್ರೀ ಶಕ್ತಿ. ದುರ್ಗೆಯು ಸಂರಕ್ಷಿಸುತ್ತಾಳೆ, ಲಕ್ಷ್ಮೀಯು ಸಮೃದ್ಧಿಯನ್ನು, ಹೇರಳತೆಯನ್ನು ಪೋಷಿಸುತ್ತಾಳೆ ಮತ್ತು ಸರಸ್ವತಿಯು ಶಿಕ್ಷಣವನ್ನು, ಜ್ಞಾನವನ್ನು ದಯಪಾಲಿಸುತ್ತಾಳೆ. ನಮ್ಮ ಪರಂಪರೆಯಲ್ಲೂ ಸಹ ಮಹಿಳೆಯರಿಗೇ ಮೊದಲ ಗೌರವ - ಸೀತಾ-ರಾಮ, ರಾಧಾ-ಕೃಷ್ಣ, ಲಕ್ಷ್ಮೀ-ನಾರಾಯಣ. ಸ್ತ್ರೀ ಶಕ್ತಿಯ ಬಗೆಗಿನ ಗೌರವವು ಈ ಭೂಮಿಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ.

ನಿಮ್ಮ ಶಕ್ತಿಯ ಸ್ವಾಮಿತ್ವವು ನಿಮ್ಮದೇ

ತಮಗೆ ಬಲ ಸಿಗಲಿ ಎಂದು ಮಹಿಳೆಯರು ಕಾಯುವುದು ಬೇಡ. ಅವರ ಬಳಿ ಈಗಾಗಲೇ ಅದು ಇದೆ! ತಮಗೆ ಸಮಾನ ಹಕ್ಕಿದೆ ಎಂದು ಅವರು ಅಂದುಕೊಂಡು ಬಿಡಬೇಕಷ್ಟೆ. ತಮ್ಮ ಬಲವನ್ನು ಹೊತ್ತುಕೊಂಡು ವಿಶ್ವಾಸದಿಂದ ಮುನ್ನಡೆಯಬೇಕು. ಮಹಿಳೆಯರ ಬಳಿ ಬುದ್ಧಿವಂತಿಕೆಯಿದೆ, ಗಹನವಾದ ಭಾವನಾತ್ಮಕತೆಯಿದೆ, ಕುಟುಂಬಗಳನ್ನು, ವ್ಯಾಪಾರಗಳನ್ನು, ರಾಷ್ಟ್ರಗಳನ್ನು ನಡೆಸುವ ಸಾಮರ್ಥ್ಯವಿದೆ. ಸಮ್ಮತಿಯನ್ನು ಪಡೆಯುವ ಯತ್ನವನ್ನು ನಿಲ್ಲಿಸಿ, ಶಕ್ತಿಯುತವಾಗಿ, ಘನತೆಯೊಂದಿಗೆ ನಾಯಕತ್ವಕ್ಕೆ ಹೆಜ್ಜೆ ಹಾಕುವ ಸಮಯವಿದು.

ಆಂತರಿಕ ಪೌಷ್ಠಿಕತೆಯ ಅವಶ್ಯಕತೆ

ಓರ್ವ ಮಹಿಳೆಯು ಸದಾ ಇತರರನ್ನು ನೋಡಿಕೊಳ್ಳುತ್ತಲೇ ಇರುತ್ತಾಳೆ- ತನ್ನ ಕುಟುಂಬವನ್ನು, ತನ್ನ ಸಹೋದ್ಯೋಗಿಗಳನ್ನು, ತನ್ನ ಸಮುದಾಯವನ್ನು ನೋಡಿಕೊಳ್ಳಬಲ್ಲಳು. ಆದರೆ ಅವಳು ಎಷ್ಟು ಬಾರಿ ತನ್ನ ಬಗ್ಗೆ ತಾನು ಕಾಳಜಿ ವಹಿಸುತ್ತಾಳೆ?

ಮೌನವು ಸೃಜನಶೀಲತೆಯ ತಾಯಿ. ಏನನ್ನಾದರೂ ಬರೆಯಬೇಕಾದಾಗ, ಆಲೋಚಿಸಬೇಕಾದಾಗ, ಅಥವಾ ಅರ್ಥಪೂರ್ಣವಾದ ಏನಾದರೊಂದನ್ನು ಸೃಷ್ಟಿಸಬೇಕಾದಾಗ, ಮೌನವಾದ ಸ್ಥಳವನ್ನು ಅರಸುತ್ತೀರಿ. ಅದೇ ರೀತಿಯಾಗಿ ಮನಸ್ಸು ಪುನಃ ಶಕ್ತಿಯುತವಾಗಲು ಮೌನವು ಬೇಕಾಗುತ್ತದೆ. ಧ್ಯಾನವು ಒಂದು ಐಷಾರಾಮಿತನದ ವಿಷಯವಲ್ಲ. ಅದೊಂದು ಅವಶ್ಯಕತೆ. ಓರ್ವ ಮಹಿಳೆಯು ತನ್ನದೇ ಜ್ಞಾನ ಮತ್ತು ಶಕ್ತಿಯೊಂದಿಗೆ ಮತ್ತೆ ಸಂಪರ್ಕ ಕಲ್ಪಿಸಿಕೊಳ್ಳುವುದು ಇಲ್ಲಿಯೇ.

ಧ್ಯಾನ ಮಾಡುವ ಮಹಿಳೆಯು ಹೊರೆಯನ್ನು ಅನುಭವಿಸದೆಯೇ ಜವಾಬ್ದಾರಿಗಳನ್ನು ನಿಭಾಯಿಸಬಲ್ಲಳು. ಧ್ಯಾನ ಮಾಡುವ ನಾಯಕರಿಗೆ, ಜನರ ನಕಾರಾತ್ಮಕತೆಯಿಂದ ಪ್ರಭಾವಿತರಾಗಿ ಕುಗ್ಗಿ ಹೋಗದೆ, ಜನರನ್ನು ನಿಭಾಯಿಸಲು ಸಾಧ್ಯ. ತಮಗೆಂದು ಸಮಯವನ್ನು ತೆಗೆದುಕೊಳ್ಳುವುದು ಸ್ವಾರ್ಥಪರತೆಯಲ್ಲ. ದಣಿವಾಗದೆಯೇ ಮುಂದೆ ನಡೆಯಲು ಮಹಿಳೆಯರಿಗೆ ಸಾಧ್ಯವಾಗುವುದು ಇದರಿಂದಲೇ. ಸಂತೋಷದಿಂದಿರುವ ಮಹಿಳೆಯು ಸಂತೋಷಮಯವಾದ ಮನೆಯನ್ನು ಸೃಷ್ಟಿಸುತ್ತಾಳೆ. ಸಂತೋಷವಾದ ಮನೆಯು ಸಂತೋಷಮಯವಾದ ಸಮಾಜವನ್ನು ಸೃಷ್ಟಿಸುತ್ತದೆ ಮತ್ತು ಸಂತೋಷಮಯವಾದ ಸಮಾಜವು ಶಾಂತಿಯುತವಾದ ಜಗತ್ತನ್ನು ಸೃಷ್ಟಿಸುತ್ತದೆ.

ಮಹಿಳೆಯರು ಸಂತೋಷವಾಗಿರುವಂತಹ ಸಮಾಜವನ್ನು ಸೃಷ್ಟಿಸುವುದು ಕೇವಲ ಒಬ್ಬಿಬ್ಬರು ವ್ಯಕ್ತಿಗಳ ಕಾರ್ಯವಲ್ಲ. ಇದೊಂದು ಸಹ-ಪ್ರಯಾಣವಾಗಿದ್ದು, ಎಲ್ಲರೂ ಇದಕ್ಕಾಗಿ ಕೊಡುಗೆ ನೀಡಬೇಕು. ಮಹಿಳೆಯರೆಲ್ಲರೂ ಒಂದಾಗಿ ಸೇರಬೇಕು - ಸ್ಪರ್ಧೆಯೊಂದಿಗೆ ಅಲ್ಲ, ಸಹಯೋಗದೊಂದಿಗೆ. ಗ್ರಾಮೀಣ ಹಾಗೂ ನಗರದ ಮಹಿಳೆಯರ ನಡುವಿನ ಅಂತರವನ್ನು; ವಿವಿಧ ಸಂಸ್ಕೃತಿಗಳ, ಹಿನ್ನೆಲೆಗಳ ನಡುವಿನ ಅಂತರವನ್ನು ಕುಗ್ಗಿಸಬೇಕಾಗಿದೆ. ಒತ್ತಡ- ರಹಿತವಾದಂತಹ, ಹಿಂಸಾಮುಕ್ತವಾದಂತಹ, ಪ್ರೇಮದಿಂದ ತುಂಬಿದಂತಹ ಜಗತ್ತನ್ನು ನಾವು ಸೃಷ್ಟಿಸಬೇಕಾಗಿದೆ. ಸಕಾರಾತ್ಮಕತೆಯಿಂದ, ಪ್ರೇಮದಿಂದ ಮತ್ತು ಎಲ್ಲರನ್ನೂ ಒಂದಾಗಿಸಿ ಮುನ್ನಡೆಸುವಂತೆ ಮಹಿಳೆಯರನ್ನು ಜಗತ್ತು ಕೈಬೀಸಿ ಕರೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.