lನನಗೆ ಒಬ್ಬಳೇ ಮಗಳು. 17 ವರ್ಷ, ಪಿಯುಸಿ ಓದುತ್ತಿದ್ದಾಳೆ. ಆರು ತಿಂಗಳ ಹಿಂದೆ ಆಗಾಗ ಸ್ವಲ್ಪ ಹೊಟ್ಟೆನೋವು ಬರುತ್ತಿತ್ತು. ಸ್ಕ್ಯಾನಿಂಗ್ ಮಾಡಿಸಿದಾಗ ಪಿಸಿಒಡಿ ಇದೆ ಎಂದು ತಿಳಿಯಿತು. ವೈದ್ಯರು ಮಾತ್ರೆ ಕೊಟ್ಟಿದ್ದರು. ಈಗ ಹೊಟ್ಟೆನೋವೇನೂ ಇಲ್ಲ. ಆದರೆ ಅವಳು ಪಿಸಿಒಡಿ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿ, ತುಂಬಾ ಅಂತರ್ಮುಖಿಯಾಗಿ ಬಿಟ್ಟಿದ್ದಾಳೆ. ಈ ವಯಸ್ಸಿನಲ್ಲೇ ಪಿಸಿಒಡಿ ಆದರೆ ಮುಂದೆ ನಿಜವಾಗಿಯೂ ತೊಂದರೆಯೇ? ಅವಳು ದಪ್ಪವೂ ಇಲ್ಲ. ನನಗಂತೂ ತುಂಬಾ ಭಯವಾಗಿದೆ, ಏನು ಮಾಡುವುದು ಡಾಕ್ಟರೇ?