ಈ ವರ್ಷದ ಸಾಧಕಿಯರು ಇವರು. ಕಸ ಆಯ್ದು ಸ್ವಚ್ಫ ಗ್ರಾಮವಾಗಿಸಿರುವ ಮಹಿಳೆಯಿಂದ ಖಗೋಳ ವಿಜ್ಞಾನಿಯವರೆಗೂ ಸಾಮಾಜಿಕ ಬದಲಾವಣೆಯಲ್ಲಿ ಗುರುತರ ಪಾತ್ರವಹಿಸಿರುವ ಈ ಮಹಿಳೆಯರ ಸಾಧನೆಯನ್ನು ಸಂಭ್ರಮಿಸುತ್ತಿದ್ದೇವೆ. ಸಮಾಧಾನದ ಜಗತ್ತಿಗಾಗಿ ಸವಾಲುಗಳನ್ನೆದುರಿಸುತ್ತಲೇ ಉಳಿದವರ ಬದುಕನ್ನು ಸಲೀಸುಗೊಳಿಸಿದವರು. ಯಾರ ಮೆಚ್ಚುಗೆಯ ಹಂಗಿಲ್ಲದೇ ಸಾಧನೆ ಮಾಡಿದವರು. ಸಮಾಜದ ಒಳಿತಿಗಾಗಿ ಶ್ರಮಿಸುವ ಎಲೆಮರೆಕಾಯಿಯಂತೆ ದುಡಿಯುತ್ತಿರುವವರಿಗೆ ಕಳೆದೊಂದು ವರ್ಷದಿಂದ ಗುರುತಿಸಿ 'ಪ್ರಜಾವಾಣಿ ಸಾಧಕಿಯರು' ಪ್ರಶಸ್ತಿ ನೀಡುತ್ತಲಿದೆ. ಕಳೆದ ವರ್ಷ ಸಾಧಕಿಯರ ಸಾಲಿನಲ್ಲಿದ್ದ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರು ಈ ವರ್ಷ ಪದ್ಮಪ್ರಶಸ್ತಿಗೆ ಭಾಜನರಾದರು. ಕ್ರೀಡೆಯನ್ನೂ ಸೇರಿದಂತೆ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಸೇವಾಭಾವಿ ಜೀವಗಳನ್ನು ಈ ವರ್ಷವೂ ಗುರುತಿಸಲಾಗಿದೆ. ಎಲ್ಲ ಅಡೆತಡೆಗಳನ್ನು ಮೀರಿ, ಮುಂದಿನ ತಲೆಮಾರಿಗಾಗಿ ಚಂದದ ಜಗತ್ತು ರೂಪಿಸುವಲ್ಲಿ ತೊಡಗಿಸಿಕೊಂಡಿರುವ ಇವರೆಲ್ಲರೂ ಅಭಿನಂದನಾರ್ಹರು.