ಒಂಟಿ ಮಹಿಳೆ. ಈ ಪದಗಳನ್ನು ಕೇಳಿದೊಡನೆ, ಆ ಮಹಿಳೆಯ ಬಗ್ಗೆ ಜನರ ಮನದಲ್ಲಿ ಹಲವು ರೀತಿಯ ಕಲ್ಪನೆಗಳು ಮೂಡತೊಡಗುತ್ತವೆ. ಅವುಗಳಲ್ಲಿ ಮುಖ್ಯವಾದವು, ಆಕೆ ಅಬಲೆ, ಆಸರೆಯ ಕೊರತೆಯಿದೆ ಎಂದುಕೊಳ್ಳುವುದು, ದಿಕ್ಕೇ ಇಲ್ಲದವಳು ಎಂಬ ನಿಕೃಷ್ಟ ಧೋರಣೆ.

ಇದು ಇತ್ತೀಚಿನ ಕಥೆಯಲ್ಲ. ಶತಮಾನಗಳಿಂದ ಮಹಿಳೆಯ ಬಗ್ಗೆ ಮೂಡಿಬಂದಿರುವ ಪರಿಕಲ್ಪನೆಯಿದು. ಬಾಲ್ಯದಲ್ಲಿ ಪೋಷಕರ ಆಸರೆ, ಯೌವನದಲ್ಲಿ ಗಂಡನ ಆಶ್ರಯ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳ ಮೇಲೆ ಅವಲಂಬನೆ. ಒಟ್ಟಾರೆ, ಮಹಿಳೆ ಇನ್ನೊಬ್ಬರ ಆಶ್ರಯದಲ್ಲೇ ಬದುಕಬೇಕು ಎಂಬ ಅಲಿಖಿತ ನಿಯಮ ನಡೆದುಕೊಂಡು ಬಂದಿದೆ.

ಒಂಟಿ ಮಹಿಳೆ ಎಂದ ಮಾತ್ರಕ್ಕೆ ಆಕೆ ನಿರಾಶ್ರಿತಳಲ್ಲ, ಸ್ವಾವಲಂಬಿ ಜೀವಿ ಎಂಬುದನ್ನು ಮನವರಿಕೆ ಮಾಡಿಕೊಡಲು ಆಯಾ ಕಾಲಘಟ್ಟಗಳಲ್ಲಿ ನಿರಂತರ ಪ್ರಯತ್ನಗಳು ನಡೆದಿವೆ. ಇಂಥ ಬೆಳವಣಿಗೆ ಆದಾಗಲೆಲ್ಲ, ಅದನ್ನು ಹೊಸಕಿಹಾಕುವ ಪ್ರಯತ್ನಗಳೂ ವ್ಯವಸ್ಥಿತವಾಗಿ ನಡೆದಿವೆ. ಆದರೂ ಒಂಟಿ ಮಹಿಳೆಯ ಹೋರಾಟ ಮಾತ್ರ ನಿಂತಿಲ್ಲ.

ವಿಜ್ಞಾನ, ತಂತ್ರಜ್ಞಾನ, ಜೀವನಶೈಲಿ, ಜಗತ್ತು, ವಿಚಾರಗಳು ಬದಲಾದಂತೆ ಒಂಟಿ ಮಹಿಳೆಯರ ಕುರಿತಾದ ಭಾವನೆಗಳೂ ಬದಲಾಗುತ್ತಿವೆ. ಒಂಟಿ ಮಹಿಳೆಯರು ಈಗ ಸಂಘಟಿತರಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿಯಲ್ಲಿ ಈಚೆಗೆ ಒಂಟಿ ಮಹಿಳೆಯರ ಸಮಾವೇಶ ನಡೆಯಿತು. ಅದರ ಘೋಷವಾಕ್ಯವೇ ಹೀಗಿತ್ತು: ಸಾಮಾಜಿಕ ಬಹಿಷ್ಕಾರ ತೊಡೆಯೋಣ, ಸ್ವಾವಲಂಬಿ ಬದುಕಿನತ್ತ ಮುನ್ನಡೆಯೋಣ.

ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದವರಿದ್ದ ಸಮಾವೇಶದಲ್ಲಿ ಹಲವು ವಿಷಯಗಳು ಚರ್ಚೆಗೆ ಒಳಪಟ್ಟವು. ಸಂಕಷ್ಟಗಳು, ಸವಾಲುಗಳನ್ನು ಎದುರಿಸುವ ಬಗೆಗಿನ ಮಾತುಗಳೂ ಕೇಳಿಬಂದವು. ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗದೆ ಗ್ರಾಮೀಣ ಭಾಗದ ಮಹಿಳೆಯರ ನೋವಿಗೂ ಸ್ಪಂದಿಸುವ ಆಶಯ ವ್ಯಕ್ತವಾಯಿತು.

ಒಂಟಿ ಮಹಿಳೆಯರನ್ನು ನಿರಾಶ್ರಿತರನ್ನಾಗಿಸದೆ ಪುನರ್ವಸತಿ ಕಲ್ಪಿಸಬೇಕು. ಅವರ ಬಗೆಗಿನ ಪೂರ್ವಗ್ರಹಪೀಡಿತ ಆಲೋಚನೆಗಳನ್ನು ತೊಡೆದುಹಾಕಿ, ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು. ಅದಕ್ಕೆ ಸರ್ಕಾರ ಸ್ಪಂದಿಸಬೇಕು. ಸಂಘಸಂಸ್ಥೆಗಳು ಬೆಂಬಲಕ್ಕೆ ನಿಲ್ಲಬೇಕು ಎಂಬ ಆಗ್ರಹ ಕೇಳಿಬಂತು.

ದೇವದಾಸಿ ಪದ್ಧತಿಯಿಂದ ಮುಕ್ತವಾಗಿರುವ ಮಹಿಳೆಯರಿಗೆ ಇನ್ನೂ ಸುಭದ್ರವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಅವರ ಮಕ್ಕಳ ಪಾಡಂತೂ ಹೇಳತೀರದು. ಮದುವೆಯಾಗಿ ಹಿಂಸೆ ಮತ್ತು ದೌರ್ಜನ್ಯ ಸಹಿಸಲಾಗದೇ ಹೊರಬಂದ ಮಹಿಳೆಯರ ಸ್ಥಿತಿಯಂತೂ ಇನ್ನೂ ಶೋಚನೀಯ. ಅತ್ತ ಗಂಡನ ಮನೆಯವರು ಆಕೆಯನ್ನು ಹೊರದಬ್ಬಿದರೆ, ಇತ್ತ ತವರು ಮನೆಯವರು ಇರಿಸಿಕೊಳ್ಳಲು ಹಿಂಜರಿಯುತ್ತಾರೆ. ಈ ಎಲ್ಲ ಸಂಗತಿಗಳ ಬಗ್ಗೆ ಕಳಕಳಿ ವ್ಯಕ್ತವಾಯಿತು.

ಒಟ್ಟಾರೆ, ಒಂಟಿ ಮಹಿಳೆಯರಿಗೆ ಸ್ಪಂದನೆಯ ಅಗತ್ಯವಿದೆ. ಶಿಕ್ಷಣ ಪೂರೈಸುವಾಗ ಮತ್ತು ವೃದ್ಧಾಪ್ಯದಲ್ಲಿ ನೆರವಾಗುವ ಸರ್ಕಾರವು ಒಂಟಿ ಮಹಿಳೆಯರ ಬಗ್ಗೆಯೂ ಕಾಳಜಿ ತೋರಬೇಕು ಎಂಬ ಆಶಯ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ್ದು. ಈ ದಿಸೆಯಲ್ಲಿ ಸರ್ಕಾರ ಸ್ಪಂದಿಸಬೇಕೆಂಬ ಆಶಯ ಸಹೃದಯರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.