ಕೀವ್: 'ಲೆಪರ್ಡ್ 2' ಯುದ್ಧ ಟ್ಯಾಂಕ್ ಬಳಸುವುದು ಹೇಗೆ ಎಂಬ ಬಗ್ಗೆ ಉಕ್ರೇನ್ ಸೇನೆಯ ಒಟ್ಟು 105 ಸೈನಿಕರು ಪೊಲೆಂಡ್‌ನಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಪೋಲೆಂಡ್ ಸೇನಾಧಿಕಾರಿಗಳು ತಿಳಿಸಿರುವುದಾಗಿ 'ಉಕ್ರಿನ್‌ಫಾರ್ಮ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಾಂತ್ರಿಕ ಸಿಬ್ಬಂದಿ ಹಾಗೂ ಟ್ಯಾಂಕ್ ನಿರ್ವಹಣಾ ತಂಡಗಳೊಂದಿಗೆ ಇಪ್ಪತ್ತೊಂದು ಮಂದಿ ಟ್ಯಾಂಕ್ ಸಿಬ್ಬಂದಿ ಒಂದುವಾರದ ಹಿಂದೆ ಪೋಲೆಂಡ್‌ನಲ್ಲಿ ತರಬೇತಿ ಆರಂಭಿಸಿದ್ದಾರೆ. ಪೋಲೆಂಡ್ ಸೇನೆಯ ಲೆಪರ್ಡ್ 2 ಟ್ಯಾಂಕ್‌ಗಳನ್ನು ಬಳಸಿಕೊಂಡು ಉಕ್ರೇನಿಯನ್ ಪಡೆಗಳು ದಿನಕ್ಕೆ 10–12 ಗಂಟೆಗಳವರೆಗೆ ತರಬೇತಿ ಪಡೆಯುತ್ತಿವೆ ಎಂದು ಸೇನೆಯ ಅಧಿಕಾರಿ ಕ್ರಿಸ್ಟೋಫ್ ಸಿಯೆರಾಡ್‌ಜ್ಕಿ ಅವರು ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ ಒಂದು ತಿಂಗಳ ವರೆಗೆ ತರಬೇತಿ ನಡೆಯಲಿದೆ. ಉಕ್ರೇನ್ ಯೋಧರ ಮತ್ತೊಂದು ತಂಡ ಸಹ ತರಬೇತಿಗೆ ಆಗಮಿಸಲಿದೆ.
ಉಕ್ರೇನಿಯನ್ ಮಿಲಿಟರಿ ಸಿಬ್ಬಂದಿಯ ಹೊಸ ಗುಂಪು ನಂತರ ತರಬೇತಿಗಾಗಿ ಪೋಲೆಂಡ್‌ಗೆ ಆಗಮಿಸುತ್ತದೆ ಎಂದು ಸಿಯೆರಾಡ್ಜ್ಕಿ ತಳ್ಳಿಹಾಕಲಿಲ್ಲ.
ಜರ್ಮನ್ ಸರ್ಕಾರವು 'ಲೆಪರ್ಡ್ 2' ಟ್ಯಾಂಕ್‌ಗಳನ್ನು ಉಕ್ರೇನ್‌ಗೆ ಪೂರೈಸಲು ಕಳೆದ ತಿಂಗಳು ನಿರ್ಧರಿಸಿತ್ತು. ಇತರ ಕೆಲವು ರಾಷ್ಟ್ರಗಳೂ ಇದಕ್ಕೆ ಬೇಡಿಕೆ ಇಟ್ಟಿವೆ.
ರಷ್ಯಾ ದೊಂದಿಗೆ ಸಂಘರ್ಷ ನಡೆಸುತ್ತಿರುವ ಉಕ್ರೇನ್‌ಗೆ 14 ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸಲು ಪೋಲೆಂಡ್ ಸಜ್ಜಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.