ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯ ದಲ್ಲಿ ಇರುವ ನಾರಾಯಣಗಂಜ್ ಜಿಲ್ಲೆಯ ಮಸೀದಿಯೊಂದರಲ್ಲಿ ಶುಕ್ರವಾರ ಸಂಜೆ ಅನಿಲ ಸೋರಿಕೆ ಕಾರಣದಿಂದ ಏಕಕಾಲಕ್ಕೆ 8 ಹವಾನಿಯಂತ್ರಕಗಳು (ಎ.ಸಿ) ಸ್ಫೋಟಗೊಂಡಿದ್ದು, ಏಳು ವರ್ಷದಬಾಲಕ ಸೇರಿದಂತೆ 17 ಮಂದಿ ಸಾವಿಗೀಡಾಗಿ, 20 ಮಂದಿ ಗಾಯಗೊಂಡಿದ್ದಾರೆ.
ಇಲ್ಲಿನ ಬೈತುಲ್ ಸಲಾತ್ ಮಸೀದಿಯಲ್ಲಿಶುಕ್ರವಾರ ರಾತ್ರಿ 9ರ ವೇಳೆ ಪ್ರಾರ್ಥನೆ ಮುಗಿಸಿ ಜನರು ಹೊರಹೋಗುವಾಗ ಸ್ಫೋಟ ಸಂಭ ವಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸ್ಫೋಟದಲ್ಲಿ ತೀವ್ರವಾಗಿ ಗಾಯ ಗೊಂಡಿದ್ದ ಬಾಲಕ ಶುಕ್ರವಾರ ಸಾವನ್ನಪ್ಪಿದರೆ, ಉಳಿದ 16 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಉಳಿದ 20 ಮಂದಿಗೆ ಶೇ 90ರಷ್ಟು ಸುಟ್ಟುಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನ ಕವಾಗಿದೆ ಎಂದು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥರಾದ ಡಾ.ಸಮಂತಾ ಲಾಲ್ ಸೇನ್ ತಿಳಿಸಿದ್ದಾರೆ.
‘ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ಶೇಖ್ ಹಸೀನಾ ಕರೆ ಮಾಡಿ ಗಾಯಾಳುಗಳ ಸ್ಥಿತಿ ವಿಚಾರಿಸಿ, ಅಗತ್ಯವಿರುವ ಚಿಕಿತ್ಸೆ ನೀಡುವಂತೆ ಸೂಚಿ ಸಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಮಸೀದಿಯ ಕೆಳಗೆ ಟೈಟಾಸ್ ಗ್ಯಾಸ್‌ನ ಪೈಪ್‌ಲೈನ್ ಹಾದುಹೋಗಿದೆ. ಕಿಟಕಿಗಳು ಬಂದ್ ಆಗಿದ್ದರಿಂದ ಪೈಪ್‌ಲೈನ್‌ನಿಂದ ಸೋರಿಕೆಯಾಗಿದ್ದ ಅನಿಲ ಮಸೀದಿಯೊಳಗೆ ಸಂಗ್ರಹವಾಗಿರಬಹುದು. ಎಸಿ ಹಾಗೂ ಫ್ಯಾನ್‌ಗಳ ಆನ್ ಮತ್ತು ಆಫ್ ವೇಳೆ ಕಿಡಿ ಹಾರಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿರಬಹುದು’ ಎಂದು ಅಗ್ನಿಶಾಮಕ ದಳದ ಉಪ ಸಹಾಯಕ ನಿರ್ದೇಶಕ ಅಬ್ದುಲ್ಲಾ ಅಲ್ ಅರೆಫಿನ್ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಫೋಟದ ತನಿಖೆಗಾಗಿ ಸರ್ಕಾರ ಸಮಿತಿಯನ್ನು ರಚಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.