ಸೋಮವಾರ, ಜೂನ್ 27, 2022
28 °C

ವಿಶ್ವಸಂಸ್ಥೆ ಶಾಂತಿಪಾಲಕರಿಗೆ ಭಾರತದ ಲಸಿಕೆ: 2ಲಕ್ಷ ಡೋಸ್‌ ನೀಡಿದ ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ:ಭಾರತವು ಉಡುಗೊರೆಯಾಗಿ ನೀಡಿದ 2 ಲಕ್ಷ ಕೋವಿಡ್‌ ಲಸಿಕೆಗಳನ್ನು ವಿಶ್ವ ಸಂಸ್ಥೆಯ ಶಾಂತಿಪಾಲಕರಿಗೆ ಈಗಾಗಲೇ ನೀಡಲಾಗಿದೆ,‘ ಆಂಟೋನಿಯೊ ಗುಟೆರೆಸ್ ವಕ್ತಾರರು ಹೇಳಿದ್ದಾರೆ.

ವಿಶ್ವ ಸಂಸ್ಥೆಯ ಶಾಂತಿಪಾಲರಿಗೆ ಲಸಿಕೆ ನೀಡಲಾಗುತ್ತಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆ ಪ್ರತಿಕ್ರಿಯಿಸಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ವಕ್ತಾರ ಸ್ಟೀಫನ್ ಡುಜಾರಿಕ್ "ಭಾರತ ಸರ್ಕಾರ ನಮಗೆ 200,000 ಡೋಸ್‌ ಲಸಿಕೆಗಳನ್ನು ನೀಡಿದೆ. ಇದರಿಂದ ಹಲವು ಶಾಂತಿಪಾಲಕರು ಈಗಾಗಲೇ ನನಗೆ ತಿಳಿದಿರುವಂತೆ ಲಸಿಕೆ ಹಾಕಿಸಿಕೊಂಡಿದ್ದಾರೆ,‘ ಎಂದಿದ್ದಾರೆ. ‌

ವಿಶ್ವ ಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ನೆರವು ನೀಡುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಜಗತ್ತಿನಾದ್ಯಂತ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ತೊಡಗಿರುವ ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಭಾರತ 200,000 ಡೋಸ್ ಕೋವಿಡ್‌ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿದೆ. 

ಈ ವರ್ಷದ ಮಾರ್ಚ್ 31ರ ಹೊತ್ತಿಗೆ, ವಿಶ್ವದಾದ್ಯಂತ 12 ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ 87,889 ಸಿಬ್ಬಂದಿ ಸೇವೆಯಲ್ಲಿ ತೊಡಗಿದ್ದರು. 

"ಸದ್ಯದ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸುತ್ತಿರುವ ವಿಶ್ವ ಸಂಸ್ಥೆಯ ಶಾಂತಿಪಾಲಕರಿಗೆ ಭಾರತವು 200,000 ಡೋಸ್ ಕೋವಿಡ್‌ ಲಸಿಕೆಯನ್ನು ಉಡುಗೊರೆಯಾಗಿ ನೀಡುತ್ತಿದೆ,‘ ಎಂದು ವಿದೇಶಾಂಗ ಸಚಿವ ಜೈಶಂಕರ್ ಅವರು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಚರ್ಚೆಯೊಂದರ ವೇಳೆ ಶುಕ್ರವಾರ ಭರವಸೆ ನೀಡಿದ್ದರು. 

‘ಇತರರ ಕಲ್ಯಾಣವನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಕೆಲಸವನ್ನು ಮಾಡಿ,‘ ಎಂಬ ಭಗವದ್ಗೀತೆಯ ಉಕ್ತಿಯೊಂದನ್ನು ಉಲ್ಲೇಖಿಸಿ ಜೈಶಂಕರ್‌ ಲಸಿಕೆ ಭರವಸೆ ನೀಡಿದ್ದರು. 

ಅಸ್ಟ್ರಾಜೆನೆಕಾ ಸಂಸ್ಥೆಯ ಲಸಿಕೆಗಳನ್ನು ಹೊತ್ತ ಕತಾರ್ ಏರ್ವೇಸ್‌ನ ವಿಮಾನಗಳು ಮಾರ್ಚ್ 27 ರಂದು ಮುಂಬೈನಿಂದ ಹೊರಟಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು