ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನ 2 ಲಕ್ಷ ಮಕ್ಕಳನ್ನು ಬಲವಂತವಾಗಿ ರಷ್ಯಾಕ್ಕೆ ಒಯ್ಯಲಾಗಿದೆ: ಝೆಲೆನ್‌ಸ್ಕಿ

Last Updated 2 ಜೂನ್ 2022, 12:50 IST
ಅಕ್ಷರ ಗಾತ್ರ

ಕೀವ್‌ (ಎಪಿ): ಎರಡು ಲಕ್ಷ ಮಕ್ಕಳು ಸೇರಿದಂತೆ ಉಕ್ರೇನ್‌ನ ನಾಗರಿಕರನ್ನು ಬಲವಂತವಾಗಿ ರಷ್ಯಾಗೆ ಕರೆದೊಯ್ಯಲಾಗಿದೆ ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಬುಧವಾರ ಹೇಳಿದರು.

ಅಂತರರಾಷ್ಟ್ರೀಯ ಮಕ್ಕಳ ದಿನದ ಅಂಗವಾಗಿಬುಧವಾರ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಅವರು,‘ಅನಾಥಾಶ್ರಮಗಳಲ್ಲಿರುವ ಮಕ್ಕಳು ಮತ್ತು ಪೋಷಕರನ್ನು ಕರೆದೊಯ್ಯಲಾಗಿದೆ. ಇದು ರಷ್ಯಾದ ಅಪರಾಧ ನೀತಿಯಾಗಿದೆ. ಇದರ ಹಿಂದಿನ ಕಾರಣ ಜನರ ಅಪಹರಣ ಮಾತ್ರವಲ್ಲ, ಬದಲಾಗಿ ಅವರು ಉಕ್ರೇನ್‌ನನ್ನು ಸಂಪೂರ್ಣವಾಗಿ ಮರೆಯುವಂತೆ ಮಾಡುವುದಾಗಿದೆ’ ಎಂದು ಹೇಳಿದರು.

‘ಈ ಕೃತ್ಯ ಎಸಗಿದವರನ್ನು ಉಕ್ರೇನ್‌ ಶಿಕ್ಷಿಸಲಿದೆ. ರಷ್ಯಾಗೆ ನಾವು ಯುದ್ಧ ಭೂಮಿಯಲ್ಲಿ ತಕ್ಕ ಉತ್ತರ ನೀಡುತ್ತೇವೆ. ಉಕ್ರೇನ್‌ನನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ಜನರು ಶರಣಾಗುವುದಿಲ್ಲ. ನಮ್ಮ ಮಕ್ಕಳು ಆಕ್ರಮಿತ ಆಸ್ತಿಯಾಗುವುದಿಲ್ಲ’ ಎಂದು ಹೇಳಿದರು.

‘243 ಕಂದಮ್ಮಗಳನ್ನು ಹತ್ಯೆಗೈಯಲಾಗಿದೆ. 446 ಮಕ್ಕಳು ಗಾಯಗೊಂಡಿದ್ದಾರೆ. 139 ಮಕ್ಕಳು ಕಾಣೆಯಾಗಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT