ಬುಧವಾರ, ಜೂನ್ 23, 2021
30 °C

ಮೆಕ್ಸಿಕೊದಲ್ಲಿ ಲಘು ವಿಮಾನ ಅಪಘಾತ; 6 ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಮೆಕ್ಸಿಕೊ ಸಿಟಿ: ಮೆಕ್ಸಿಕೋದ ಉತ್ತರ ಭಾಗದ ಗಡಿ ರಾಜ್ಯವಾದ ಸೊನೊರಾದಲ್ಲಿ ಶನಿವಾರ ಲಘು ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಹಾಗೂ ಒಬ್ಬರು ಗಾಯಗೊಂಡಿದ್ದಾರೆ.

ಈ ನತದೃಷ್ಟ ಸೆಸ್ನಾ ವಿಮಾನ ಸೊನಾರಾದ ಹೆರ್ಮೊಸಿಲ್ಲೊ ನಗರದಿಂದ ಆರಿಜೋನಾದ ಟುಕ್ಸನ್‌ಗೆ ಹೊರಟಿತ್ತು. ಟೇಕಾಫ್‌ ಆದ ಕೆಲವೇ ಹೊತ್ತಲ್ಲಿ ವಿಮಾನ ಪತನವಾಯಿತು.

ಮೃತಪಟ್ಟವರಲ್ಲಿ ಸೊನಾರಾ ರಾಜ್ಯದ ಸರ್ಕಾರಿ ಆರ್ಥಿಕ ಅಭಿವೃದ್ಧಿ ಅಧಿಕಾರಿ ಲಿಯನಾರ್ಡೊ ಸಿಸ್ಕೊಮನಿ ಮತ್ತು ವಿಮಾನದ ಪೈಲಟ್‌ ಸಹ ಸೇರಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು