ವಾಷಿಂಗ್ಟನ್:ಅಮೆರಿಕದಲ್ಲಿ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ತೆರೆಯಲು ನಿರ್ಧರಿಸಿದ ಕೆಲ ದಿನಗಳ ಮೊದಲು, ಅಂದ್ರೆಅಂದರೆ ಜುಲೈ ತಿಂಗಳ ಕೊನೆಯಲ್ಲಿ ಒಟ್ಟು97 ಸಾವಿರ ಮಕ್ಕಳಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜುಲೈ 16 ರಿಂದ 30ರ ಅವಧಿಯಲ್ಲಿ ನಡೆದ ಪರೀಕ್ಷೆಗಳ ಮಾಹಿತಿಯನ್ನುಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಮಕ್ಕಳ ತಜ್ಞರ ಸಂಸ್ಥೆ)ಬಹಿರಂಗಪಡಿಸಿದೆ. ಈವರೆಗೆ ಅಮೆರಿದಲ್ಲಿ3,38,000 ಮಕ್ಕಳಿಗೆ ಸೋಂಕು ತಗುಲಿದೆ ಎಂದು ಈ ಮಾಹಿತಿ ಉಲ್ಲೇಖಿಸಿದೆ.

ಆಗಸ್ಟ್ ತಿಂಗಳಲ್ಲಿ ಕೆಲವು ಶಾಲೆಗಳು ಕಾರ್ಯಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದರ ಪರ-ವಿರೋಧ ಚರ್ಚೆಗಳೂ ಗರಿಗೆದರಿವೆ.

ವಾಂಡರ್‌ಬಿಲ್ಟ್ ವಿಶ್ವವಿದ್ಯಾಲಯದ ಡಾ. ಟೀನಾ ಹಾರ್ಟರ್ಟ್ ಮಾತನಾಡಿ, ಕೊವೀಡ್-19 ಸೋಂಕು ಪತ್ತೆಗೆ ಮಕ್ಕಳನ್ನು ಜಾಸ್ತಿ ಪ್ರಮಾಣದಲ್ಲಿ ಪರೀಕ್ಷೆಗೆ ಒಳಪಡಿಸುತ್ತಿರುವುದರಿಂದಾಗಿಸೋಂಕು ಹರಡುವಿಕೆ ಅರಿವಿಗೆ ಬರುತ್ತಿದೆ ಎಂದು ಹೇಳಿದ್ದಾರೆ. ಸರ್ಕಾರದ ಅನುದಾನದಿಂದ ಈ ಅಧ್ಯಯನ ನಡೆಯುತ್ತಿದೆ.2,000 ಕುಟುಂಬಗಳು ತಾವೇ ತಪಾಸಣೆ ಮಾಡಿಕೊಳ್ಳಬಲ್ಲ ಸುಲಭ ಪರೀಕ್ಷಾ ಕಿಟ್‌ಗಳನ್ನು ಸ್ವೀಕರಿಸಿವೆ.

'ಈ ಕಿಟ್‌ಗಳನ್ನು ಕುಟುಂಬಗಳಿಗೆ ರವಾನಿಸಿ, ಮಾದರಿಗಳನ್ನು ಹೇಗೆ ಸಂಗ್ರಹಿಸಬೇಕು ಎಂದು ಅವರಿಗೆ ಕಲಿಸಲಾಗುತ್ತದೆ ಮತ್ತು ನಂತರ ಸಂಗ್ರಹಿಸಿದ ಮಾದರಿಗಳನ್ನು ಕುಟುಂಬಗಳು ಪರೀಕ್ಷಾ ಕೇಂದ್ರಕ್ಕೆ ಕಳುಹಿಸುತ್ತಾರೆ' ಎಂದು ಅವರು ಸಿಬಿಎಸ್ ನ್ಯೂಸ್‌ಗೆ ತಿಳಿಸಿದ್ದಾರೆ.

ಮಕ್ಕಳು ಕೊರೊನಾ ವೈರಸ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ಈ ಮೊದಲು ನಂಬಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೀಗೆ ಹೇಳಿಕೆಯನ್ನೂ ನೀಡಿದ್ದರು.ಆದರೆ ಜುಲೈನಲ್ಲಿ ಕೋವಿಡ್-19ನಿಂದಾಗಿ ಕನಿಷ್ಠ 25 ಮಕ್ಕಳು ಅಮೆರಿಕದಲ್ಲಿ ಸಾವಿಗೀಡಾಗಿದ್ದಾರೆ. ಇದು ಶಾಲೆಗಳು ತೆರೆದ ಬಳಿಕ ಕೋವಿಡ್ ವಿರುದ್ಧ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಧ್ಯಯನ ನಡೆಸುತ್ತಿದ್ದಾರೆ.

ಗುಂಪುಗೂಡುವಿಕೆಯನ್ನು ನಿಷೇಧಿಸುವುದು, ಪ್ರವಾಸಗಳ ನಿಷೇಧ ಮತ್ತು ಹೊರಗಿನ ಸಂದರ್ಶಕರಿಗೆ ನಿರ್ಬಂಧ ಸೇರಿದಂತೆ ಕೆಲವು ವಿಶ್ವವಿದ್ಯಾನಿಲಯಗಳು ಈಗಾಗಲೇ ಸುರಕ್ಷಿತವಾಗಿ ಪುನಃ ತೆರೆಯಲು ಹೊಸ ನಿಯಮಗಳನ್ನು ರೂಪಿಸಿವೆ.

ಈಗಾಗಲೇ ಶಾಲೆಗಳು ಪುನಃ ತೆರೆದಿರುವ ಜಾರ್ಜಿಯಾದ ನಾರ್ತ್ ಪೌಲ್ಡಿಂಗ್ ಪ್ರೌಢಶಾಲೆಯಲ್ಲಿನ ಫೋಟೊವೊಂದು ಕಳೆದ ವಾರ ವೈರಲ್ ಆಗಿದ್ದು, ವಿದ್ಯಾರ್ಥಿಗಳು ಮಾಸ್ಕ್ ಧರಿಸಿಲ್ಲದಿರುವುದನ್ನು ತೋರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.