ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಚಿನ್ನದ ಗಣಿಯಲ್ಲಿ ಹಿಂಸಾಚಾರ: ಆಫ್ರಿಕಾದ ಚಾಡ್‌ ದೇಶದಲ್ಲಿ 100 ಮಂದಿ ಸಾವು

Last Updated 30 ಮೇ 2022, 15:34 IST
ಅಕ್ಷರ ಗಾತ್ರ

ಎನ್‌ಜಾಮಿನಾ: ಲಿಬಿಯಾ ಗಡಿಗೆ ಹೊಂದಿಕೊಂಡಿರುವ ಮಧ್ಯ ಆಫ್ರಿಕಾದ ಚಾಡ್‌ ದೇಶದ ಉತ್ತರದಲ್ಲಿರುವ ಚಿನ್ನದ ಗಣಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 100 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.

ಕೌರಿ ಬೌಗೌಡಿ ಜಿಲ್ಲೆಯಪರ್ವತದಲ್ಲಿನ ಚಿನ್ನದ ಗಣಿಗಾರಿಕೆ ಸ್ಥಳದಲ್ಲಿಮೇ 23 ಮತ್ತು ಮೇ 24ರಂದು ರಾತ್ರಿ ವೇಳೆ ಹಿಂಸಾಚಾರ ಭುಗಿಲೆದ್ದಿತ್ತು. ಘಟನಾ ಸ್ಥಳ ತಲುಪುವಷ್ಟರಲ್ಲಿ ಸಾವಿನ ಸಂಖ್ಯೆ ನೂರಕ್ಕೆ ಮುಟ್ಟಿತ್ತು ಎಂದುರಕ್ಷಣಾ ಸಚಿವ ದೌದ್ ಯಾಯಾ ಬ್ರಾಹಿಂ ಸೋಮವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಎಲ್ಲ ಅಕ್ರಮ ಗಣಿಗಾರಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳದಿಂದ ಕಾರ್ಮಿಕರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಘಟನೆಯ ಸತ್ಯಶೋಧನೆ ಮತ್ತು ಶಾಂತಿ ಸ್ಥಾಪನೆಗೆಚಾಡ್ ಸರ್ಕಾರವು ಮೇ 25ರಂದೇ ಘಟನಾ ಸ್ಥಳಕ್ಕೆ ಕಾರ್ಯಾಚರಣೆ ತಂಡವನ್ನು ಕಳುಹಿಸಿತ್ತು. ಆದರೆ, ಮೃತಪಟ್ಟವರ ಮತ್ತು ಗಾಯಗೊಂಡವರ ಬಗ್ಗೆ ನಿಖರ ಮಾಹಿತಿ ಸಿಕ್ಕಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT