ಮಂಗಳವಾರ, ಆಗಸ್ಟ್ 3, 2021
26 °C

ಕೋವಿಡ್‌: ಬ್ರೆಜಿಲ್‌ನಲ್ಲಿ 5 ಲಕ್ಷ ತಲುಪಿದ ಮೃತರ ಸಂಖ್ಯೆ; ಭುಗಿಲೆದ್ದ ಪ್ರತಿಭಟನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ರಿಯೋ ಡಿ ಜನೈರೊ: ಬ್ರೆಜಿಲ್‌ನಲ್ಲಿ ಕೋವಿಡ್‌ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 5 ಲಕ್ಷ ತಲುಪಿದೆ. ಇದರಿಂದ ಆಕ್ರೋಶಗೊಂಡಿರುವ ಜನರು ಬೀದಿಗಿಳಿದು ಪ್ರತಿಭಟಿಸಿದ್ದಾರೆ.

ಬ್ರೆಜಿಲ್‌ನ ಹಲವೆಡೆ ಶನಿವಾರ ಪ್ರತಿಭಟನೆಗಳು ನಡೆದಿದ್ದು, ಕೋವಿಡ್‌ ನಿಯಂತ್ರಿಸುವಲ್ಲಿ ಅಧ್ಯಕ್ಷ ಜೈರ್‌ ಬೋಲ್ಸೊನಾರೊ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ರಿಯೋ ಡಿ ಜನೈರೊ ನಗರದಲ್ಲಿ ಸೇರಿದ್ದ ಸಾವಿರಾರು ಪ್ರತಿಭಟನಕಾರರು ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗಿದರು. ‘ಇದು ಹಸಿವು ಮತ್ತು ನಿರುದ್ಯೋಗದ ಸರ್ಕಾರ’ ಎಂಬ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ‌‘5 ಲಕ್ಷ ಸಾವುಗಳಿಗೆ ಬೋಲ್ಸೊನಾರೊ ಅವರೇ ಕಾರಣ’ ಎಂದು ಹೇಳುವ ಪೋಸ್ಟರ್‌ಗಳನ್ನು ಪ್ರತಿಭಟನೆಗಳಲ್ಲಿ ಬಳಸಲಾಗಿತ್ತು.

‘ಬ್ರೆಜಿಲ್ ದೊಡ್ಡ ಹಿನ್ನಡೆ ಅನುಭವಿಸುತ್ತಿದೆ. ಲಸಿಕೆ ನೀಡಿಕೆಯಲ್ಲಿ ವಿಶ್ವದಲ್ಲೇ ಲಸಿಕೆಯಲ್ಲಿ ನಮ್ಮ ದೇಶ ಮುಂದಿತ್ತು. ನಮ್ಮಲ್ಲಿ ಮಹತ್ವದ ಸಂಸ್ಥೆಗಳೂ ಇವೆ. ಆದರೂ ನಾವು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ’ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 20 ವರ್ಷದ ವಿದ್ಯಾರ್ಥಿನಿ ಇಸ್‌ಬೇಲಾ ಗೌಲ್ಜೋರ್ ಹೇಳಿದರು.

ಬ್ರೆಜಿಲ್‌ನ 26 ಅಥವಾ 22 ರಾಜ್ಯಗಳು ಮತ್ತು ಫೆಡರಲ್‌ ಡಿಸ್ಕ್ರಿಕ್ಟ್‌ ಬ್ರೆಜಿಲಿಯಾದಲ್ಲೂ ಸರ್ಕಾರದ ವಿರುದ್ಧ ಹಲವು ಪ್ರತಿಭಟನಾ ಮೆರವಣಿಗೆಗಳು ನಡೆದೆವು.

ಮುಂದಿನ ಅಧ್ಯಕ್ಷೀಯ ಚುನಾವಣೆ ವೇಳೆ ಬೋಲ್ಸೊನಾರೊ ಅವರ ಹೆಸರು ಕೆಡಿಸಲು ಎಡಪಂಥೀಯ ವಿರೋಧ ಪಕ್ಷಗಳು ಈ ಪ್ರತಿಭಟನೆಗಳನ್ನು ಉತ್ತೇಜಿಸುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.

ಬ್ರೆಜಿಲ್‌ನಲ್ಲಿ ಶೇಕಡ 12ರಷ್ಟು ಜನಸಂಖ್ಯೆಗೆ ಮಾತ್ರ ಲಸಿಕೆ ನೀಡಲಾಗಿದೆ. ಬ್ರೆಜಿಲ್‌ 21.3 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಪ್ರತಿನಿತ್ಯ 1 ಲಕ್ಷ ಹೊಸ ಪ್ರಕರಣಗಳು ಮತ್ತು 2 ಸಾವಿರ ಸಾವು ವರದಿಯಾಗುತ್ತಿವೆ. ಇದಕ್ಕೆ ಲಸಿಕೆ ನೀಡಿಕೆಯಲ್ಲಿ ನಿಧಾನಗತಿಯೂ ಒಂದು ಕಾರಣ ಎಂದು ಟೀಕಾಕಾರರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು