ಸೋಮವಾರ, ಜನವರಿ 25, 2021
17 °C

ಕೋವಿಡ್‌-19 ಲಸಿಕೆ: ಅಸ್ಟ್ರಾಜೆನೆಕಾ ಕಂಪನಿಯಿಂದ ಹೆಚ್ಚುವರಿ ಪ್ರಯೋಗ ಸಾಧ್ಯತೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಲಂಡನ್‌: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ಕೋವಿಡ್ -19 ಲಸಿಕೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಹೆಚ್ಚುವರಿ ಪ್ರಯೋಗ ನಡೆಸುವ ಸಾಧ್ಯತೆಯಿದೆ ಎಂದು ಅಸ್ಟ್ರಾಜೆನೆಕಾ ಕಂಪನಿಯು ಗುರುವಾರ ಮಾಹಿತಿ ನೀಡಿದೆ.

ಅಸ್ಟ್ರಾಜೆನೆಕಾ ಕಂಪನಿಯು ಸಿದ್ಧಪಡಿಸಿರುವ ಕೋವಿಡ್‌ ಲಸಿಕೆಯ ರಕ್ಷಣೆಯ ಮಟ್ಟ ಮತ್ತು ಪಾರದರ್ಶಕತೆಯ ಕೊರತೆಯ ಬಗ್ಗೆ ಕೆಲವು ಪ್ರಶ್ನೆಗಳು ಕೇಳಬಂದಿದ್ದವು. ಆ ಹಿನ್ನೆಲೆಯಲ್ಲಿ ಲಸಿಕೆಯ ಗುಣಮಟ್ಟ ಹಾಗೂ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಹೆಚ್ಚುವರಿ ಪ್ರಯೋಗ ನಡೆಸುವ ಸಾಧ್ಯತೆ ಇದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್‌ ಅನ್ನು ತಡೆಗಟ್ಟುವಲ್ಲಿ ಅಸ್ಟ್ರಾಜೆನೆಕಾ ಸಿದ್ಧಪಡಿಸಿರುವ ಕೋವಿಡ್‌ ಲಸಿಕೆಯು ಸರಾಸರಿ 70 ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿಯು ಕಳೆದ ವಾರ ಹೇಳಿತ್ತು. ಲಸಿಕೆಯ ಎರಡು ಡೋಸೇಜ್‌ಗಳನ್ನು ನೀಡಿದಾಗ ಒಂದರಲ್ಲಿ ಶೇ. 62ರಷ್ಟು, ಮತ್ತೊಂದರಲ್ಲಿ ಶೇ. 90ರಷ್ಟು ಪರಿಣಾಮಕಾರಿತ್ವ ಕಂಡು ಬಂದಿದೆ ಎಂದು ಅದು ಮಾಹಿತಿ ನೀಡಿತ್ತು.

ಲಸಿಕೆಯ ದತ್ತಾಂಶವನ್ನು ವಿಶ್ವದ ಎಲ್ಲ ಔಷಧ ನಿಯಂತ್ರಕ ಸಂಸ್ಥೆಗಳಿಗೆ ನೀಡುವುದಾಗಿ ಅಸ್ಟ್ರಾಜೆನೆಕಾ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು