ಗುರುವಾರ , ಆಗಸ್ಟ್ 5, 2021
28 °C
ಡೆಲ್ಟಾ ಮತ್ತು ಕಪ್ಪಾ ಮಾದರಿಯ ವೈರಸ್ ಬಹಳ ಗಂಭೀರವಾದದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

’ಡೆಲ್ಟಾ’ ವಿರುದ್ಧ ಅಸ್ಟ್ರಾಜನಿಕಾ ಲಸಿಕೆ ಪರಿಣಾಮಕಾರಿ: ಅಧ್ಯಯನ ವರದಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲಂಡನ್: ಭಾರತದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್‌ನ ಹೊಸ ಮಾದರಿಗಳಾದ ಡೆಲ್ಟಾ ಮತ್ತು ಕಪ್ಪಾ ರೂಪಾಂತರಿತ ವೈರಸ್‌ಗಳಿಗೆ ಅಸ್ಟ್ರಾಜನಿಕಾ ಲಸಿಕೆ ಪರಿಣಾಮಕಾರಿ ಎಂದು ಅಧ್ಯಯನವೊಂದು ತಿಳಿಸಿದೆ.

ಕಳೆದ ಸೋಮವಾರವಷ್ಟೇ ಡೆಲ್ಟಾ ಮತ್ತು ಕಪ್ಪಾ ಮಾದರಿಯ ವೈರಸ್ ಬಹಳ ಗಂಭೀರವಾದದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಕೈಗೊಂಡ ಅಧ್ಯಯನವು ಕೊರೊನಾದಿಂದ ಚೇತರಿಸಿಕೊಂಡ ಜನರಿಂದ ಹಾಗೂ ಡೆಲ್ಟಾ ಮತ್ತು ಕಪ್ಪಾ ರೂಪಾಂತರಗಳನ್ನು ತಡೆಗಟ್ಟಲು ಲಸಿಕೆ ಹಾಕಿಸಿದವರ ರಕ್ತದಲ್ಲಿನ ಮೊನೊಕ್ಲೋನಲ್ ಪ್ರತಿಕಾಯಗಳ ಸಾಮರ್ಥ್ಯವನ್ನು ತನಿಖೆ ಮಾಡಿ ಈ ಅಭಿಪ್ರಾಯ ಮಂಡಿಸಲಾಗಿದೆ ಎಂದು ಹೇಳಿದೆ.

ಕಳೆದ ವಾರ ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ ಸಂಸ್ಥೆ (PHE) ಕೂಡ ಫೈಜರ್ ಹಾಗೂ ಅಸ್ಟ್ರಾಜನಿಕಾ ಡೆಲ್ಟಾ ರೂಪಾಂತರಿಗೆ ಪರಿಣಾಮಕಾರಿ ಲಸಿಕೆ ಎಂದು ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು