ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ 19: ಫೈಜರ್‌ ಲಸಿಕೆ ಬಳಕೆಗೆ ಬಹರೇನ್‌ ಅನುಮತಿ

ಲಸಿಕೆ ಬಳಕೆಗೆ ಅನುಮತಿ ನೀಡಿದ ಎರಡನೇ ರಾಷ್ಟ್ರ
Last Updated 5 ಡಿಸೆಂಬರ್ 2020, 7:31 IST
ಅಕ್ಷರ ಗಾತ್ರ

ದುಬೈ: ಫೈಜರ್ ಮತ್ತು ಬಯೋಎನ್‌ಟೆಕ್ ಅಭಿವೃದ್ಧಿಪಡಿಸಿದ ಕೋವಿಡ್‌– 19 ವಿರುದ್ಧದ ಲಸಿಕೆಯ ತುರ್ತು ಬಳಕೆಗೆ ಬಹರೇನ್‌ ಅನುಮತಿ ನೀಡಿದೆ.

ಈ ಮೂಲಕ ಬಹರೇನ್‌, ತುರ್ತು ಸಂದರ್ಭದಲ್ಲಿ ಲಸಿಕೆ ಬಳಕೆಗೆ ಅನುಮತಿ ನೀಡಿದ ಎರಡನೇ ರಾಷ್ಟ್ರವಾಗಿದೆ. ಈ ಲಸಿಕೆ ಬಳಕೆಗೆ ಬ್ರಿಟನ್ ಕಳೆದ ವಾರ ಅನುಮತಿ ನೀಡಿತ್ತು.

‘ಲಸಿಕೆ ಪ್ರಯೋಗ, ದತ್ತಾಂಶ ವಿಶ್ಲೇಷಣೆಗಳನ್ನು ಆಧರಿಸಿ ಬಹರೇನ್‌ನ ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಪ್ರಾಧಿಕಾರ, ಫೈಜರ್ ಮತ್ತು ಬಯೋಎನ್‌ಟೆಕ್‌ ಉತ್ಪಾದಿಸಿದ ಕೋವಿಡ್‌– 19 ವಿರುದ್ಧದ ಲಸಿಕೆಯನ್ನು ಬಳಸಲು ಅನುಮೋದನೆ ನೀಡಿದೆ’ ಎಂದು ಸರ್ಕಾರಿ ಒಡೆತನದ ಸುದ್ದಿ ಸಂಸ್ಥೆ ಬಹರೇನ್‌ ನ್ಯೂಸ್‌ ಏಜೆನ್ಸಿ ತಿಳಿಸಿದೆ.

ಲಸಿಕೆಯ ಎಷ್ಟು ಡೋಸ್‌ಗಳನ್ನು ಖರೀದಿಸಲಾಗಿದೆ. ಯಾವಾಗಿನಿಂದ ಈ ಲಸಿಕೆಗಳನ್ನು ಜನರಿಗೆ ನೀಡಲು ಆರಂಭಿಸಲಾಗುತ್ತದೆ ಎಂಬ ಮಾಹಿತಿಯನ್ನು ಬಹರೇನ್‌ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT