ಸೋಮವಾರ, ಜುಲೈ 4, 2022
21 °C
ಚೀನಾ ಸರ್ಕಾರ ಮಾಹಿತಿ

ಚೀನಾ ವಿಮಾನದ ಒಂದು ಬ್ಲ್ಯಾಕ್‌ಬಾಕ್ಸ್, ರೆಕಾರ್ಡರ್ ಪತ್ತೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಚೀನಾದ ದಕ್ಷಿಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದ್ದ ವಿಮಾನದ ಒಂದು ಬ್ಲ್ಯಾಕ್‌ಬಾಕ್ಸ್ ಬುಧವಾರ ಪತ್ತೆಯಾಗಿದ್ದು, ಇನ್ನೊಂದು ಬ್ಲ್ಯಾಕ್‌ಬಾಕ್ಸ್‌ಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.

ವಿಮಾನದ ಪೈಲಟ್ ಕೊಠಡಿಯ ರೆಕಾರ್ಡರ್ ಸಹ ಪತ್ತೆಯಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಚೀನಾದ ವಿಮಾನಯಾನ ಪ್ರಾಧಿಕಾರದ ವಕ್ತಾರ ಲಿಯು ಲುಸಾಂಗ್ ಅವರು ಮಾಹಿತಿ ನೀಡಿದ್ದಾರೆ. ಆದರೆ ಈ ರೆಕಾರ್ಡರ್ ಪೂರ್ತಿ ಹಾನಿಗೀಡಾಗಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.

ಈ ವಿಮಾನದಲ್ಲಿ 132 ಮಂದಿ ಪ್ರಯಾಣಿಕರಿದ್ದರು. ಯಾವುದೇ ಪ್ರಯಾಣಿಕರು ಬದುಕುಳಿದ ಸಾಧ್ಯತೆಗಳಿಲ್ಲ ಎಂದು ವರದಿಗಳು ತಿಳಿಸಿವೆ. ಕೆಲವರ ಗುರುತಿನ ಚೀಟಿಗಳು, ವಿಮಾನದ ಕೆಲವು ಅವಶೇಷಗಳು ಬಿಟ್ಟರೆ ಯಾರೊಬ್ಬರ ಮೃತದೇಹವೂ ಸಿಕ್ಕಿಲ್ಲ.

ಈ ಮಧ್ಯೆ, ವಿಮಾನದ ಅವಶೇಷಗಳ ಶೋಧಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು