ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್ ಸ್ಫೋಟ: ಗವರ್ನರ್ ಸೇರಿ ಮೂವರು ಸಾವು

Last Updated 9 ಮಾರ್ಚ್ 2023, 12:38 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಅಫ್ಗಾನಿಸ್ತಾನದ ಮಜರ್‌ ಎ ಷರೀಫ್ ನಗರದ ಗವರ್ನರ್ ಕಚೇರಿಯ ಬಳಿ ನಡೆದ ಬಾಂಬ್‌ ಸ್ಫೋಟ ಕೃತ್ಯದಲ್ಲಿ, ತಾಲಿಬಾನ್ ಸರ್ಕಾರ ನೇಮಕ ಮಾಡಿದ್ದ ಗವರ್ನರ್ ಹಾಗೂ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ.

ಮಜರ್‌ ಇ ಷರೀಫ್ ನಗರವು ಬಲ್ಖ್ ಪ್ರಾಂತ್ಯದ ರಾಜಧಾನಿಯೂ ಆಗಿದೆ. ಗವರ್ನರ್ ದೌದ್ ಮಜ್ಮಲ್‌ ಮತ್ತು ಅವರ ಕಚೇರಿಯ ಇಬ್ಬರು ಸಿಬ್ಬಂದಿ ಮೃತರಾದರು ಎಂದು ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ಕೃತ್ಯದ ಹೊಣೆಯನ್ನು ಯಾವುದೇ ಸಂಘಟನೆ ಈವರೆಗೆ ಹೊತ್ತುಕೊಂಡಿಲ್ಲ. ತಾಲಿಬಾನ್‌ನ ಪ್ರಮುಖ ವಿರೋಧಿ ಬಣ ಇಸ್ಲಾಮಿಕ್ ಸ್ಟೇಟ್‌ ಸಮೂಹದ ಅಂಗಸಂಸ್ಥೆ ಖೋರಸನ್‌ನ ಇಸ್ಲಾಮಿಕ್‌ ಸ್ಟೇಟ್‌ ಕೃತ್ಯದ ಹಿಂದಿರಬಹುದು ಎಂದು ಶಂಕಿಸಲಾಗಿದೆ.

ತಾಲಿಬಾನ್ 2021ರ ಆಗಸ್ಟ್‌ನಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಉಗ್ರ ಸಂಘಟನೆಯು ದಾಳಿ ಕೃತ್ಯಗಳನ್ನು ಹೆಚ್ಚಿಸಿದೆ. ತಾಲಿಬಾನ್ ಗಸ್ತುಪಡೆ, ಸಿಬ್ಬಂದಿಯನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT