ಬುಧವಾರ, ಜುಲೈ 28, 2021
28 °C

ಸ್ಪುಟ್ನಿಕ್- ವಿ ಲಸಿಕೆ ಆಮದನ್ನು ತಿರಸ್ಕರಿಸಿದ ಬ್ರೆಜಿಲ್ ಆರೋಗ್ಯ ಪ್ರಾಧಿಕಾರ

ಪಿಟಿಐ‌ Updated:

ಅಕ್ಷರ ಗಾತ್ರ : | |

ಬ್ರೆಜಿಲ್: ರಷ್ಯಾ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆಯಾದ ಸ್ಪುಟ್ನಿಕ್ ವಿ ಅನ್ನು ಆಮದು ಮಾಡಿಕೊಳ್ಳಲು ಶಿಫಾರಸು ಮಾಡುವುದಿಲ್ಲ ಎಂದು ಬ್ರೆಜಿಲ್‌ನ ಆರೋಗ್ಯ ಪ್ರಾಧಿಕಾರ ಅನ್ವಿಸಾ (ಏಜೆನ್ಸಿಯ ನ್ಯಾಷನಲ್ ಡಿ ವಿಜಿಲೆನ್ಸಿ ಸ್ಯಾನಿಟೇರಿಯಾ) ಸೋಮವಾರ ತಡರಾತ್ರಿ ಹೇಳಿದೆ.

ಪ್ರಮುಖ ಸುರಕ್ಷತಾ ಪರೀಕ್ಷೆಗಳನ್ನು ನಡೆಸಲಾಗಿಲ್ಲ ಮತ್ತು ಲಸಿಕೆಯ ಅಭಿವೃದ್ಧಿ, ಸುರಕ್ಷತೆ ಮತ್ತು ಉತ್ಪಾದನೆಯ ಬಗ್ಗೆ ಇನ್ನು ಪ್ರಶ್ನೆಗಳು ಉಳಿದುಕೊಂಡಿವೆ ಎಂದು ಅನ್ವಿಸಾ ಹೇಳಿದೆ.

ಲಸಿಕೆಯ ಪರಿಣಾಮಕಾರಿತ್ವದ ಕುರಿತಾದ ಮಾಹಿತಿಯು 'ಅನಿಶ್ಚಿತ'ವಾಗಿದೆ ಎಂದು ಅನ್ವಿಸಾದ ಔಷಧ ಮತ್ತು ಜೈವಿಕ ಉತ್ಪನ್ನಗಳ ವ್ಯವಸ್ಥಾಪಕ ಗುಸ್ಟಾವೊ ಮೆಂಡೆಸ್ ಲಿಮಾ ಸ್ಯಾಂಟೋಸ್ ಆರೋಗ್ಯ ಪ್ರಾಧಿಕಾರದ ನಿರ್ಧಾರವನ್ನು ವಿವರಿಸುವ ಪ್ರಸ್ತುತಿಯಲ್ಲಿ ತಿಳಿಸಿದ್ದಾರೆ.

ಲಸಿಕೆ ತಯಾರಿಕರು ಅನ್ವಿಸಾದೊಂದಿಗೆ 'ಅಗತ್ಯವಿರುವ ಎಲ್ಲ ಮಾಹಿತಿ ಮತ್ತು ದಾಖಲಾತಿಗಳನ್ನು' ಹಂಚಿಕೊಂಡಿದ್ದಾರೆ ಎಂದು ಪೋರ್ಚುಗೀಸ್ ಭಾಷೆಯಲ್ಲಿ ಅಧಿಕೃತ ಸ್ಪುಟ್ನಿಕ್ ವಿ ಟ್ವಿಟ್ಟರ್ ಖಾತೆಯಿಂದ ಸೋಮವಾರ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟಿನಲ್ಲಿ, 'ನಮಗೆ ವ್ಯರ್ಥ ಮಾಡಲು ಸಮಯವಿಲ್ಲ - ಬ್ರೆಜಿಲ್‌ನಲ್ಲಿ ಒಟ್ಟಿಗೆ ಜೀವ ಉಳಿಸಲು ಪ್ರಾರಂಭಿಸೋಣ' ಎಂದು ಅನ್ವಿಸಾಗೆ ಒತ್ತಾಯಿಸಿದೆ.

ರಷ್ಯಾ ತನ್ನ ಸಾಮೂಹಿಕ ಲಸಿಕಾ ಅಭಿಯಾನದಲ್ಲಿ ಸ್ಪುಟ್ನಿಕ್ ವಿ ಅನ್ನು ಬಳಸುತ್ತಿದೆ ಮತ್ತು ಲಸಿಕೆಯನ್ನು ಡಜನ್‌ಗಟ್ಟಳೆ ಇತರ ದೇಶಗಳಲ್ಲಿ ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ. ಈ ಮಧ್ಯೆ ಕೊನೆಯ ಹಂತದ ಪ್ರಯೋಗಗಳು ಪ್ರಾರಂಭವಾಗುವ ಮೊದಲೇ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಲಸಿಕೆ ಬಳಕೆಗೆ ಅನುಮೋದನೆ ನೀಡಿದ್ದಾರೆ ಎಂಬುದು ರಾಜಕೀಯ ಪ್ರಚಾರದಲ್ಲಿ ಸಿಕ್ಕಿಹಾಕಿಕೊಂಡಿದ್ದು, ತಿಂಗಳುಗಳಿಂದ, ಪಾಶ್ಚಿಮಾತ್ಯ ವಿಜ್ಞಾನಿಗಳು ಈ ಕುರಿತು ಮಾತನಾಡಿದ್ದಾರೆ.

ರಷ್ಯಾದ ಆರೋಗ್ಯ ಸಚಿವಾಲಯದ ಭಾಗವಾದ ಗಮಲೇಯ ಸಂಶೋಧನಾ ಸಂಸ್ಥೆ ಲಸಿಕೆಯನ್ನು ಅಭಿವೃದ್ಧಿಪಡಿಸಿತು, ಇದನ್ನು ಗ್ಯಾಮ್-ಕೋವಿಡ್-ವ್ಯಾಕ್ ಎಂದೂ ಕರೆಯುತ್ತಾರೆ. ಫೆಬ್ರವರಿಯಲ್ಲಿ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಪೀರ್-ಪರಿಶೀಲನಾ ಅಧ್ಯಯನವು ಲಸಿಕೆಯು ಶೇ 91.6ರಷ್ಟು ಪರಿಣಾಮಕಾರಿತ್ವ ಪ್ರಮಾಣವನ್ನು ಹೊಂದಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು