ಶುಕ್ರವಾರ, ಜನವರಿ 27, 2023
26 °C

ಬಹ್ರೇನ್‌ನಲ್ಲಿ ಗಣಪತಿ ಮೂರ್ತಿಗಳನ್ನು ಒಡೆದ ಬುರ್ಖಾ‌ಧಾರಿ ಮಹಿಳೆ: ವಿಡಿಯೊ ವೈರಲ್‌

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮನಾಮ: ಬಹ್ರೇನ್‌ನ ಶಾಪಿಂಗ್‌ ಮಾಲ್‌ವೊಂದರಲ್ಲಿ ಇರಿಸಲಾಗಿದ್ದ ಹಿಂದೂ ದೇವರ ಮೂರ್ತಿಗಳನ್ನು ಬುರ್ಖಾಧಾರಿ ಮಹಿಳೆಯೊಬ್ಬರು ಕೆಳಗೆ ಬೀಳಿಸಿ ಛಿದ್ರಗೊಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಬಹ್ರೇನ್‌ನ ಜುಫೈರ್‌ ಎಂಬಲ್ಲಿನ ಶಾಪಿಂಗ್‌ ಮಾಲ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಡಿಯೊ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ, ಶಾಪಿಂಗ್‌ ಮಾಲ್‌ಗೆ ಹಾನಿಗೊಳಿಸಿದ ಮತ್ತು ನಿರ್ದಿಷ್ಟ ಸಮುದಾಯವೊಂದರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿಯಲ್ಲಿ ಪೊಲೀಸರು 54 ವರ್ಷದ ಮಹಿಳೆಯೊಬ್ಬರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಬಹ್ರೇನ್‌ನ ಸುದ್ದಿ ಮಾಧ್ಯಮ ‘ಗಲ್ಫ್‌ ಡೈಲಿ ನ್ಯೂಸ್‌’ ವರದಿ ಮಾಡಿದೆ.

ಗಣಪತಿ ಮೂರ್ತಿಗಳನ್ನು ಛಿದ್ರಗೊಳಿಸುತ್ತಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದ್ದು, ಮಹಿಳೆಯ ಕೃತ್ಯಕ್ಕೆ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು