ಗುರುವಾರ , ಜೂನ್ 30, 2022
21 °C

ವಿಡಿಯೊ ನೋಡಿ: ಬಾಲಕಿ ಅಪಹರಿಸಲು ಯತ್ನಿಸಿ ಜೈಲುಪಾಲಾದ ಯುವಕ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

11 ವರ್ಷದ ಬಾಲಕಿಯನ್ನು ಅಪರಹಣ ಮಾಡಲು ಯತ್ನಿಸಿದ ಘಟನೆ ಅಮೆರಿಕದಲ್ಲಿ ನಡೆದಿದ್ದು ಇದರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಫ್ಲೋರಿಡಾದ ಬಸ್‌ ನಿಲ್ದಾಣ ಸಮೀಪದಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದ ಅಪಹರಣಕಾರ ಬಾಲಕಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಾನೆ. ಆದರೆ ಬಾಲಕಿ ಪ್ರತಿರೋಧ ಒಡ್ಡಿದ್ದರಿಂದ ಅವನ ಯತ್ನ ಫಲಿಸುವುದಿಲ್ಲ. 

ಈ ಘಟನೆ ನಡೆದ ಮರುದಿನವೇ ಅಮೆರಿಕ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಅಪಹರಣಕಾರನ ಬಳಿ ಚಾಕು ಇತ್ತು, ಆಗ ನನಗೆ ಭಯವಾಗಿತ್ತು, ಅವನಿಂದ ತಪ್ಪಿಸಿಕೊಳ್ಳುವುದೊಂದೆ ನನ್ನ ಮುಂದೆ ಇದ್ದ ದಾರಿ ಎಂದು ಬಾಲಕಿ ಇನ್‌ಸೈಡರ್‌ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಅಪಹರಣಕಾರ ನನ್ನ ಎತ್ತಿಕೊಂಡು ಐದಾರು ಹೆಜ್ಜೆ ಮುಂದೆ ಇಟ್ಟಾಗ, ಅವನ ಪಕ್ಕೆಗೆ ಬಲವಾಗಿ ಗುದ್ದಿದೆ. ಆಗ ಇಬ್ಬರು ಕೆಳೆಗೆ ಬಿದ್ದೆವು. ಬಳಿಕ ಅವನಿಂದ ತಪ್ಪಿಸಿಕೊಂಡೆ ಎಂದು ಬಾಲಕಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು