ಭಾನುವಾರ, ಜೂನ್ 26, 2022
21 °C

ಚೀನಾ: ವ್ಯಕ್ತಿಯೊಬ್ಬರಲ್ಲಿ ಎಚ್‌10ಎನ್‌3 ಹಕ್ಕಿ ಜ್ವರ ಪತ್ತೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಚೀನಾದ ಪಶ್ಚಿಮ ಪ್ರಾಂತ್ಯದ ಜಿಯಾಂಗ್ಸುನ 41 ವರ್ಷದ ವ್ಯಕ್ತಿಯೊಬ್ಬರಲ್ಲಿ ಎಚ್‌10ಎನ್‌3 ತಳಿಯ ಹಕ್ಕಿ ಜ್ವರ ಪತ್ತೆಯಾಗಿದೆ.

ಈ ತಳಿಯಿಂದ ಸೋಂಕಿಗೆ ಒಳಪಟ್ಟ ಮೊದಲ ಮಾನವ ಪ್ರಕರಣ ಇದಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಮಂಗಳವಾರ ತಿಳಿಸಿದೆ.

ಜೆನ್‌ಜಿಯಾಗ್‌ ನಗರದ ನಿವಾಸಿಯಾದ ಆ ವ್ಯಕ್ತಿಯು ಜ್ವರ ಮತ್ತು ಇತರ ರೋಗ ಲಕ್ಷಣಗಳಿಂದ ಏಪ್ರಿಲ್‌ 28ರಂದು ಆಸ್ಪತ್ರೆಗೆ ದಾಖಲಾದರು. ಅವರಿಗೆ ಎಚ್‌10ಎನ್‌3 ತಳಿಯ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿದೆ ಎಂದು ಎನ್‌ಎಚ್‌ಸಿ ಪ್ರಕಟಣೆ ತಿಳಿಸಿದೆ. ಆದರೆ ಆ ವ್ಯಕ್ತಿಗೆ ಹೇಗೆ ಸೋಂಕು ತಗುಲಿತು ಎಂಬುದರ ವಿವರಗಳನ್ನು ಆಯೋಗ ನೀಡಿಲ್ಲ.

‘ಎಚ್10ಎನ್3 ಕಡಿಮೆ ರೋಗಕಾರಕ. ಕೋಳಿಗಳಲ್ಲಿ ಕಂಡು ಬರುವ ಈ ವೈರಸ್ ತಳಿ ವ್ಯಾಪಕವಾಗಿ ಹರಡುವ ಸಾಧ್ಯತೆ ತೀರ ಕಡಿಮೆ’ ಎಂದು ಎನ್‌ಎಚ್‌ಸಿ ತಿಳಿಸಿದೆ.

ಆ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಮನೆಗೆ ಹೋಗಲು ಸಿದ್ಧರಾಗಿದ್ದಾರೆ. ಅವರ ಸಂಪರ್ಕಿತರಲ್ಲಿ ಈ ಸೋಂಕು ಪತ್ತೆಯಾಗಿಲ್ಲ. ಎಚ್10ಎನ್3 ತಳಿಯ ಹಕ್ಕಿ ಜ್ವರ ಕಾಣಿಸಿಕೊಂಡ ಮಾನವ ಪ್ರಕರಣಗಳು ಈ ಹಿಂದೆ ಜಾಗತಿಕವಾಗಿ ವರದಿಯಾಗಿಲ್ಲ ಎಂದು ಎನ್‌ಎಚ್‌ಸಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು