ವಾಷಿಂಗ್ಟನ್: ಪ್ರಪಂಚದಾದ್ಯಂತ ಇದುವರೆಗೆ ಒಟ್ಟು 6.19 (6,19,80,023) ಕೋಟಿ ಜನರಿಗೆಕೊರೊನಾ ವೈರಸ್ ಸೋಂಕು ತಗುಲಿದೆ. ಇದರಲ್ಲಿ 4.27 (4,27,84,315) ಕೋಟಿಮಂದಿ ಗುಣಮುಖರಾಗಿದ್ದು, 14,48 (14,48,928) ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಕೋವಿಡ್ ಟ್ರ್ಯಾಕರ್ ವೆಬ್ಸೈಟ್ 'ವರ್ಲ್ಡೊ ಮೀಟರ್' ಅಂಕಿ ಅಂಶಗಳಿಂದ ತಿಳಿದುಬಂದಿದೆ.

'ಮೊದಲ ಬಾರಿಗೆ ವೈರಸ್ ಕಾಣಿಸಿಕೊಂಡ ಚೀನಾದಲ್ಲಿ ಶನಿವಾರ ಕೇವಲ 6 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ,' ಎಂದು ಆರೋಗ್ಯ ಪ್ರಾಧಿಕಾರ ಮಾಹಿತಿ ನೀಡಿದೆ. ವರದಿಯಾದ ಆರು ಪ್ರಕರಣಗಳು ಚೀನಾಕ್ಕೆ ಹೊರಗಿನಿಂದ ಬಂದವುಗಳಾಗಿವೆ. ಇತ್ತೀಚೆಗೆ ಅಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ನವೆಂಬರ್ 27ರ ಹೊತ್ತಿಗೆ, ಚೀನಾದಲ್ಲಿ ಒಟ್ಟಾರೆ 86,501 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈವರೆಗೂ ಸೋಂಕಿನಿಂದ 4,634 ಜನರು ಸಾವಿಗೀಡಾಗಿದ್ದಾರೆ.

ಜಗತ್ತಿನಲ್ಲಿ ಒಟ್ಟಾರೆ 1.77 (1,77,46,780) ಕೋಟಿ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 105,224 ಜನರ ಸ್ಥಿತಿ ಗಂಭೀರವಾಗಿದೆ.

ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 1,34,54,254 ಪ್ರಕರಣಗಳು ದಾಖಲಾಗಿದ್ದು, 2,71,026 ಜನರು ಮೃತಪಟ್ಟಿದ್ದಾರೆ.

ಅಮೆರಿಕದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ 93.51 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಈವರಗೆ 1.36 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಉಳಿದಂತೆ ಬ್ರೆಜಿಲ್ನಲ್ಲಿ 62.38 ಲಕ್ಷ, ಫ್ರಾನ್ಸ್ನಲ್ಲಿ 21.96 ಲಕ್ಷ, ರಷ್ಯಾದಲ್ಲಿ 22.15 ಲಕ್ಷ, ಸ್ಪೇನ್ನಲ್ಲಿ 16.46 ಲಕ್ಷ ಮತ್ತು ಇಂಗ್ಲೆಂಡ್ನಲ್ಲಿ 15.89ಕ್ಕಿಂತಲೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.