ಶುಕ್ರವಾರ, ಆಗಸ್ಟ್ 19, 2022
25 °C

ಚೀನಾ: ಗುರುತ್ವಾಕರ್ಷಕ ತರಂಗ ಪತ್ತೆಗಾಗಿ ಎರಡು ಉಪಗ್ರಹಗಳ ಉಡ್ಡಯನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಗುರುತ್ವಾಕರ್ಷಕ ತರಂಗಗಳು, ಅಧಿಕ ಶಕ್ತಿಯು ವಿಕಿರಣಗಳ ಪತ್ತೆ, ನ್ಯೂಟ್ರಾನ್‌ ತಾರೆಗಳು ಹಾಗೂ ಕಪ್ಪುರಂಧ್ರಗಳು ಸೇರಿದಂತೆ ವಿವಿಧ ಖಗೋಳ ವಿದ್ಯಮಾನಗಳ ಅಧ್ಯಯನ ಉದ್ದೇಶದ ಎರಡು ಉಪಗ್ರಹಗಳನ್ನು ಚೀನಾ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿತು.

ಸಿಚುವಾನ್‌ ಪ್ರಾಂತ್ಯದ ಷಿಚಾಂಗ್‌ ಉಪಗ್ರಹ ಉಡಾವಣಾ ಕೇಂದ್ರದಿಂದ ಈ ಎರಡು ಉಪಗ್ರಹಗಳನ್ನು ಲಾಂಗ್‌ ಮಾರ್ಚ್‌–11 ರಾಕೆಟ್‌ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಉಡ್ಡಯನ ಮಾಡಿತು ಎಂದು ಸರ್ಕಾರಿ ಒಡೆತನದ ಸುದ್ದಿ ಸಂಸ್ಥೆ ಷಿನ್‌ಹುವಾ ವರದಿ ಮಾಡಿದೆ.

ಈ ಉಪಗ್ರಹಗಳು ಗುರುತ್ವಾಕರ್ಷಕ ತರಂಗ, ಅಧಿಕ ಶಕ್ತಿಯ ವಿದ್ಯುತ್‌ಕಾಂತೀಯ ತರಂಗಗಳನ್ನು ಪತ್ತೆ ಮಾಡುವ ವ್ಯವಸ್ಥೆಯಾದ ‘ಗ್ರ್ಯಾವಿಟೇಷನಲ್ ವೇವ್‌ ಹೈ ಎನರ್ಜಿ ಎಲೆಕ್ಟ್ರೋಮ್ಯಾಗ್ನೇಟಿಕ್‌ ಕೌಂಟರ್‌ಪಾರ್ಟ್‌ ಆಲ್‌ ಸ್ಕೈ ಮಾನಿಟರ್‌’ (ಜಿಇಸಿಎಎಂ) ಹೊಂದಿವೆ. ಹೀಗಾಗಿ ಇವುಗಳನ್ನು ‘ಜಿಇಸಿಎಎಂ’ ಉಪಗ್ರಹಗಳು ಎಂದು ಕರೆಯಲಾಗುತ್ತದೆ.

ಖಗೋಳದಲ್ಲಿ ತಾರೆಗಳು, ಕಪ್ಪುರಂಧ್ರಗಳು ಆಗಾಗ ಸ್ಫೋಟಗೊಳ್ಳುತ್ತವೆ. ಆಗ ಅಧಿಕ ಶಕ್ತಿಯ ವಿವಿಧ ತರಂಗಗಳು ಹೊರಹೊಮ್ಮುತ್ತವೆ. ಪ್ರಬಲ ಗುರುತ್ವಾಕರ್ಷಣ ಶಕ್ತಿಯುಳ್ಳ ನಕ್ಷತ್ರಗಳು, ಕಪ್ಪರಂಧ್ರಗಳ ಸೆಳೆತಕ್ಕೆ ಒಳಗಾಗಿ ಕೆಲವು ಆಕಾಶಕಾಯಗಳು ಅವುಗಳಲ್ಲಿ ವಿಲೀನಗೊಳ್ಳುತ್ತವೆ. ಈ ವಿದ್ಯಮಾನ ಕುರಿತು ಸಹ ಜಿಇಸಿಎಎಂ ಅಧ್ಯಯನ ನಡೆಸುತ್ತದೆ.

ಸೂರ್ಯನಿಂದ ಹೊರಹೊಮ್ಮುವ ಸೌರಜ್ವಾಲೆಗಳು, ಭೂಮಿಯಲ್ಲಿ ಕಂಡುಬರುವ ಗಾಮಾ ಕಿರಣಗಳನ್ನು ಸಹ ಈ ಉಪಗ್ರಹಗಳು ಪತ್ತೆ ಮಾಡಿ, ಮಾಹಿತಿ ಸಂಗ್ರಹಿಸಲಿವೆ ಎಂದು ಸಂಸ್ಥೆ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು