ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೋವಿಡ್ -19 ಲಸಿಕೆ ನೀಡಲು ಮುಂದಾದ ಚೀನಾ

Last Updated 8 ಜೂನ್ 2021, 10:40 IST
ಅಕ್ಷರ ಗಾತ್ರ

ಬೀಜಿಂಗ್: ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್ -19 ಲಸಿಕೆ ತುರ್ತು ಬಳಕೆಗೆ ಚೀನಾ ಅನುಮೋದನೆ ನೀಡಿದೆ ಎಂದು ಔಷಧ ತಯಾರಕ ಸಂಸ್ಥೆ ಸಿನೋವ್ಯಾಕ್ ಮಂಗಳವಾರ ದೃಢಪಡಿಸಿದೆ. ಈ ಮೂಲಕ ಚಿಕ್ಕ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಮುಂದಾದ ದೇಶಗಳಲ್ಲಿ ಚೀನಾ ಮೊದಲನೇಯದ್ದಾಗಿದೆ.

ಕೊರೊನಾ ವೈರಸ್ ಮೊದಲ ಬಾರಿಗೆ ಮಧ್ಯ ಚೀನಾದಲ್ಲಿ ಪತ್ತೆಯಾದ ಬಳಿಕ ಚೀನಾವು ಕೊರೊನಾವನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ನಿಧಾನಗತಿಯ ಆರಂಭದ ನಂತರ ಸುಮಾರು 77 ಕೋಟಿ ಜನರಿಗೆ ಲಸಿಕೆ ಹಾಕಿದೆ.

ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ತಮ್ಮ ಕಂಪನಿಯ ಲಸಿಕೆ ನೀಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ಸಿನೋವ್ಯಾಕ್ ಸಂಸ್ಥೆಯ ವಕ್ತಾರರು ಎಎಫ್‌ಪಿಗೆ ತಿಳಿಸಿದ್ದಾರೆ.

‘ಇತ್ತೀಚೆಗೆ, ಸಿನೋವಾಕ್ ಲಸಿಕೆಯನ್ನು ಮೂರರಿಂದ 17 ವರ್ಷದ ಮಕ್ಕಳಿಗೆ ನೀಡಲು ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.

ಆದರೆ, ಚಿಕ್ಕ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಯಾವಾಗ ಆರಂಭವಾಗಲಿದೆ ಎಂಬುದನ್ನು ಅವರು ದೃಢಪಡಿಸಿಲ್ಲ, ಚೀನಾದ ಪ್ರಸ್ತುತ ‘ಸಾಂಕ್ರಾಮಿಕ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಅಗತ್ಯತೆಗಳು ಮತ್ತು ಲಸಿಕೆ ಪೂರೈಕೆ’ಯ ಪ್ರಕಾರ ಲಸಿಕೆ ವೇಳಾಪಟ್ಟಿಯನ್ನು ರಾಷ್ಟ್ರೀಯ ಆರೋಗ್ಯ ಆಯೋಗ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ಮಕ್ಕಳು ಮತ್ತು ಹದಿಹರೆಯದವರಲ್ಲಿ ಲಸಿಕೆಯ ಆರಂಭಿಕ ಹಂತದ ಪ್ರಯೋಗಗಳನ್ನು ಕಂಪನಿಯು ಪೂರ್ಣಗೊಳಿಸಿದೆ. ಶೀಘ್ರದಲ್ಲೇ, ಲ್ಯಾನ್ಸೆಟ್ ವೈಜ್ಞಾನಿಕ ಜರ್ನಲ್‌ನಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.

ಮಕ್ಕಳಿಗೆ ಲಸಿಕೆ ನೀಡಲು ಅನುಮೋದಿಸಲಾಗಿದೆ. ಸಿನೋವ್ಯಾಕ್ ಲಸಿಕೆಯ ಲಸಿಕೆ ಸುರಕ್ಷತೆ ಮತ್ತು ಪರಿಣಾಮಕಾರಿತ್ವ’ಸಾಬೀತಾಗಿದೆ ಎಂದು ಸ್ಟೇಟ್ ಕೌನ್ಸಿಲ್‌ನ ಸಾಂಕ್ರಾಮಿಕ ಪ್ರತಿಕ್ರಿಯೆ ಕಾರ್ಯಪಡೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಚೀನಾದ ಸಿ.ಸಿ.ಟಿ.ವಿ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT