ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid World Update | ದಕ್ಷಿಣ ಆಫ್ರಿಕಾದಲ್ಲಿ ತಗ್ಗಿದ ಪ್ರಕರಣ, ಲಾಕ್‌ಡೌನ್ ಸಡಿಲ

Last Updated 17 ಆಗಸ್ಟ್ 2020, 17:12 IST
ಅಕ್ಷರ ಗಾತ್ರ

ಬೀಜಿಂಗ್‌: ಜಾಗತಿಕವಾಗಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 2,18,27,459ಕ್ಕೆ ಏರಿಕೆಯಾಗಿದೆ.

ಈ ಮಧ್ಯೆ, ಜಾಗತಿಕ ಕೋವಿಡ್‌ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದಲ್ಲಿ ಸೋಂಕು ಪ್ರಕರಣಗಳು ತಗ್ಗಿದ್ದು, ದೇಶದಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಲಾಗುತ್ತಿದೆ.

ಕಳೆದ ಐದು ತಿಂಗಳ ಹಿಂದ ದಕ್ಷಿಣ ಆಫ್ರಿಕಾ ಅತ್ಯಂತ ಕಠಿಣ ಲಾಕ್‌ಡೌನ್‌ ಕ್ರಮಗಳನ್ನು ಜಾರಿಗೆ ತಂದಿತ್ತು. ಸದ್ಯ ಲಾಕ್‌ಡೌನ್‌ ಸಡಿಲಗೊಳಿಸಲಾದ್ದು, ಮದ್ಯ–ಸಿಗರೇಟು ಮಾರಾಟಕ್ಕೂ ಅವಕಾಶ ಮಾಡಿಕೊಡಲಾಗಿದೆ. ಸದ್ಯ ದಕ್ಷಿಣ ಆಫ್ರಿಕಾದಲ್ಲಿ5,80,000 ಕ್ಕೂ ಅಧಿಕ ಪ್ರಕರಣಗಳಿದ್ದು,11,800 ಮಂದಿ ಮೃತಪಟ್ಟಿದ್ದಾರೆ.

ಇನ್ನು ಕ್ಯಾನ್‌ಸಿನೋ ಬಯೋ ಇಂಕ್‌ ಅಭಿವೃದ್ಧಿಪಡಿಸಿರುವ ಕೊರೊನಾ ವೈರಸ್‌ ಲಸಿಕೆಗೆ ಚೀನಾ ಸರ್ಕಾರ ಪೇಟೆಂಟ್‌ ನೀಡಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಆಗಸ್ಟ್‌ 11ರಂದು ಪೇಟೆಂಟ್‌ ನೀಡಲಾಗಿದೆ. ಆದರೆ ಲಸಿಕೆಯ ಕುರಿತಾದ ಹೆಚ್ಚಿನ ಮಾಹಿತಿಗಳು ಹೊರ ಬಿದ್ದಿಲ್ಲ.

ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಜಾಗತಿಕವಾಗಿ ಕೊರೊನಾ ಪೀಡಿತರ ಸಂಖ್ಯೆ 2,18,27,459ಕ್ಕೆ ಏರಿಕೆಯಾಗಿದ್ದು ಒಟ್ಟು 7,73,095 ಜನರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 1, 45,64,827 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಜಗತ್ತಿನಲ್ಲಿ ಒಟ್ಟಾರೆ 64,89,537 ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೊರೊನಾ ಅಂಕಿಅಂಶಗಳ ಸಂಪನ್ಮೂಲ ಸಂಸ್ಥೆ ವರ್ಡೋಮೀಟರ್‌ ವರದಿ ಮಾಡಿದೆ.

55,66,632 ಪ್ರಕರಣಗಳೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 33,40,197 ಪ್ರಕರಣಗಳೊಂದಿಗೆ ಬ್ರೆಜಿಲ್‌ ಎರಡನೇ ಸ್ಥಾನ, 26,48,353 ಪ್ರಕರಣಗಳೊಂದಿಗೆ ಭಾರತ ಮೂರನೇ ಸ್ಥಾನದಲ್ಲಿದೆ. ಸೋಂಕಿಗೆ ತುತ್ತಾಗಿ ಅಮೆರಿಕದಲ್ಲಿ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ 1.73 ಲಕ್ಷ, ಬ್ರೆಜಿಲ್‌ನಲ್ಲಿ 1.7 ಲಕ್ಷ ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 50 ಸಾವಿರ ದಾಟಿದೆ.

ಒಟ್ಟಾರೆ ಸೋಂಕಿನ ಪಟ್ಟಿಯಲ್ಲಿ ರಷ್ಯಾ(9,22,853) ನಾಲ್ಕನೇ ಸ್ಥಾನ, ದಕ್ಷಿಣ ಆಫ್ರಿಕಾ(5,87,345) 5ನೇ ಸ್ಥಾನ, ಪೆರು (5,35,946)6ನೇ ಸ್ಥಾನ, ಮೆಕ್ಸಿಕೊ(5,22,162)7ನೇ ಸ್ಥಾನ, ಕೊಲಂಬಿಯಾ (4,68,332)8ನೇ ಸ್ಥಾನ, ಚಿಲಿ (3,85,946)9ನೇ ಸ್ಥಾನ ಹಾಗೂ ಸ್ಪೇನ್‌ (3,58,843) ಹತ್ತನೇ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT