ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಗ್ಗಿದ ಚೀನಾ ಜನಸಂಖ್ಯೆ

Last Updated 17 ಜನವರಿ 2023, 6:59 IST
ಅಕ್ಷರ ಗಾತ್ರ

ಬೀಜಿಂಗ್: ಆರು ದಶಕಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಇದೇ ಮೊದಲ ಬಾರಿಗೆ ಚೀನಾದ ಜನಸಂಖ್ಯೆಯು ಗಮನಾರ್ಹ ಪ್ರಮಾಣದಲ್ಲಿ ತಗ್ಗಿದೆ ಎಂದು ಮಂಗಳವಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ.

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವು ಸದ್ಯ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿದೆ.

140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಜನನ ಪ್ರಮಾಣವು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜನಸಂಖ್ಯೆ ದಿಢೀರ್ ಕುಸಿತವು ಆರ್ಥಿಕ ಬೆಳವಣಿಗೆ ಹಾಗೂ ಸಾರ್ವಜನಿಕ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆರ್ಥಿಕ ವಿಶ್ಲೇಷಕರು ಎಚ್ಚರಿಸಿದ್ದಾರೆ.

2021ರ ಅಂತ್ಯದ ವೇಳೆಗೆ ಚೀನಾ ಜನಸಂಖ್ಯೆಯಲ್ಲಿ 0.85(8.5 ಲಕ್ಷ) ಮಿಲಿಯನ್‌ನಷ್ಟು ಇಳಿಕೆಯಾಗಿದ್ದು, 2022ರ ಅಂತ್ಯದ ವೇಳೆಗೆ, ಚೀನಾದ ಒಟ್ಟು ಜನಸಂಖ್ಯೆ 1,411.75 ಮಿಲಿಯನ್(ಸುಮಾರು 141 ಕೋಟಿ) ಆಗಿತ್ತು ಎಂದು ಬೀಜಿಂಗ್‌ನ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಹೇಳಿದೆ.

1960ರ ಗ್ರೇಟ್ ಲೀಪ್ ಫಾರ್ವರ್ಡ್ ಎಂದು ಕರೆಯಲ್ಪಡುವ ಮಾವೋ ಝೆಡಾಂಗ್ ಅವರ ವಿನಾಶಕಾರಿ ಕೃಷಿ ನೀತಿಯಿಂದ ಉಂಟಾದ ಅತ್ಯಂತ ಭೀಕರ ಕ್ಷಾಮದಿಂದ ಚೀನಾದ ಜನಸಂಖ್ಯೆಯು ಭಾರಿ ಪ್ರಮಾಣದಲ್ಲಿ ಕುಸಿದಿತ್ತು.

ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುವ ಆತಂಕದ ಹಿನ್ನೆಲೆಯಲ್ಲಿ 1980ರ ದಶಕದಲ್ಲಿ ಜಾರಿಗೆ ತರಲಾಗಿದ್ದ ಒಂದೇ ಮಗುವಿನ ನೀತಿಯನ್ನು 2016ರಲ್ಲಿ ಹಿಂಪಡೆದುಕೊಳ್ಳಲಾಗಿತ್ತು. 2021ರಲ್ಲಿ ದಂಪತಿಗೆ ಮೂರು ಮಕ್ಕಳನ್ನು ಪಡೆಯಲು ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT