ಸೋಮವಾರ, ಮಾರ್ಚ್ 8, 2021
22 °C

ವುಹಾನ್‌ ಪ್ರಕರಣದ ವರದಿ ಮಾಡಿದ್ದ ನಾಗರಿಕ ಪತ್ರಕರ್ತೆಗೆ ನಾಲ್ಕ ವರ್ಷ ಜೈಲುಶಿಕ್ಷೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಶಾಂಘೈ: ವುಹಾನ್‌ ನಗರದಲ್ಲಿ ‘ಕೋವಿಡ್‌ 19‘ ಸಾಂಕ್ರಾಮಿಕ ರೋಗ ಹರಡುವುದನ್ನು ನೇರವಾಗಿ ವರದಿ ಮಾಡಿದ್ದ ನಾಗರಿಕ ಪತ್ರಕರ್ತೆಯೊಬ್ಬರಿಗೆ ಶಾಂಘೈ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಾಜಿ ವಕೀಲೆ ಝಾಂಗ್‌ ಝಾನ್‌, ಜೈಲು ಶಿಕ್ಷೆಗೆ ಗುರಿಯಾದ ಪತ್ರಕರ್ತೆ. ‘ಸಂಘರ್ಷವನ್ನು ಪ್ರೋತ್ಸಾಹಿಸಿ ಮತ್ತು ತೊಂದರೆ ಉಂಟುಮಾಡಿದ‘ ಆರೋಪದ ಮೇಲೆ ಶಾಂಘೈ ನ್ಯಾಯಾಲಯ, ಝಾಂಗ್‌ಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ವುಹಾನ್‌ ನಗರದ ಕೋವಿಡ್‌ 19 ಸಾಂಕ್ರಾಮಿಕ ರೋಗದ ಕುರಿತು ಝಾಂಗ್ ಮಾಡುತ್ತಿದ್ದ ಲೈವ್ ವರದಿಗಳು, ಫೆಬ್ರುವರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹಂಚಿಕೆಯಾಗುತ್ತಿದ್ದವು. ಇದು ಅಧಿಕಾರಿಗಳ ಗಮನ ಸೆಳೆಯಿತು. ಇಲ್ಲಿವರೆಗೆ ಸರ್ಕಾರ, ಎಂಟು ಮಂದಿಗೆ ಶಿಕ್ಷೆ ವಿಧಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು