ಗುರುವಾರ , ಅಕ್ಟೋಬರ್ 1, 2020
27 °C

ಪಿಕ್ಸೆಲ್‌ ಸಂಶೋಧಕ ರಸಲ್‌ ಕಿರ್ಶ್‌ ನಿಧನ

ಎಪಿ Updated:

ಅಕ್ಷರ ಗಾತ್ರ : | |

Prajavani

ಪೋರ್ಟ್‌ಲ್ಯಾಂಡ್‌: ಕಂಪ್ಯೂಟರ್‌ ವಿಜ್ಞಾನಿ, ಪಿಕ್ಸೆಲ್‌ ಸೃಷ್ಟಿಕರ್ತ ರಸಲ್‌ ಕಿರ್ಶ್(91)‌ ಆ.11ರಂದು ಒರಗನ್‌ನ  ಪೋರ್ಟ್‌ಲ್ಯಾಂಡ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

1957ರಲ್ಲಿ ಕಿರ್ಶ್‌ ತಮ್ಮ ಮಗ ವಾಲ್ಡೆನ್‌ನ ಎರಡು ಇಂಚು ಉದ್ದ ಮತ್ತು ಅಗಲದ ಕಪ್ಪುಬಿಳುಪಿನ ಡಿಜಿಟಲ್‌ ಚಿತ್ರವನ್ನು ಸೃಷ್ಟಿಸಿದ್ದರು. ಈ ಮೂಲಕ ಪಿಕ್ಸೆಲ್ಸ್‌ (ಡಿಜಿಟಲ್‌ ಚುಕ್ಕೆಗಳ ಮುಖಾಂತರ ಮೊಬೈಲ್‌ ಅಥವಾ ಕಂಪ್ಯೂಟರ್‌ ಪರದೆಯಲ್ಲಿ ಚಿತ್ರಗಳನ್ನು ಸೃಷ್ಟಿಸುವುದು) ಎನ್ನುವ ಹೊಸ ಕಲ್ಪನೆ ಜಗತ್ತಿಗೆ ಪರಿಚಯವಾಗಿತ್ತು. ರಸಲ್‌ ಅವರ ಸಂಶೋಧನಾ ತಂಡವು ಆವಿಷ್ಕರಿಸಿದ್ದ ಉಪಕರಣವೊಂದರ ಮುಖಾಂತರ ಈ ಚಿತ್ರವನ್ನು ಸ್ಕ್ಯಾನ್‌ ಮಾಡಿ ಕಂಪ್ಯೂಟರ್‌ಗೆ ಹಾಕಲಾಗಿತ್ತು. ಸ್ಕ್ಯಾನ್ ಮಾಡಿ, ಕಂಪ್ಯೂಟರ್‌ಗೆ ಹಾಕಲಾಗಿದ್ದ ಜಗತ್ತಿನ ಮೊಟ್ಟ ಮೊದಲ ಚಿತ್ರ ಇದಾಗಿತ್ತು. 

ರಸಲ್‌ ಅವರ ಈ ಅನ್ವೇಷಣೆಯೇ ಮುಂದೆ ಉಪಗ್ರಹ ಚಿತ್ರ, ಸಿಟಿ ಸ್ಕ್ಯಾನ್‌, ವರ್ಚುವಲ್‌ ರಿಯಾಲಿಟಿ, ಫೇಸ್‌ಬುಕ್‌ ಮುಂತಾದ ಅನ್ವೇಷಣೆಗಳಿಗೆ ಬುನಾದಿಯಾಯಿತು ಎಂದು 2010ರಲ್ಲಿ ಪ್ರಕಟಣೆಗೊಂಡಿದ್ದ ವಿಜ್ಞಾನ ಕುರಿತ ಅಂಕಣವೊಂದರಲ್ಲಿ ಉಲ್ಲೇಖಿಸಲಾಗಿತ್ತು. ರಸಲ್‌ ಅವರು ಸೃಷ್ಟಿಸಿದ ಮೊದಲ ಡಿಜಿಟಲ್‌ ಚಿತ್ರದಲ್ಲಿ ಒಟ್ಟು 31 ಸಾವಿರ ಪಿಕ್ಸೆಲ್‌ಗಳು ಇದ್ದವು. ಪ್ರಸ್ತುತ ಐಫೋನ್‌ 11ರ ಡಿಜಿಟಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸುವ ಒಂದು ಚಿತ್ರದಲ್ಲಿ 1.2 ಕೋಟಿ ಪಿಕ್ಸೆಲ್‌ಗಳಿವೆ.

1929ರಲ್ಲಿ ಮ್ಯಾನಹಟನ್‌ನಲ್ಲಿ ಜನಿಸಿದ್ದ ಕಿರ್ಶ್‌, ನ್ಯೂಯಾರ್ಕ್‌ ವಿಶ್ವವಿದ್ಯಾಲಯ, ಹಾರ್ವರ್ಡ್‌ ಹಾಗೂ ಎಂಐಟಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ‘ಯು.ಎಸ್‌. ನ್ಯಾಷನಲ್‌ ಬ್ಯೂರೊ ಆಫ್‌ ಸ್ಟ್ಯಾಂಡರ್ಡ್ಸ್‌’ನಲ್ಲಿ ಐದು ದಶಕಗಳ ಕಾಲ ಸಂಶೋಧನಾ ವಿಜ್ಞಾನಿಯಾಗಿ‌ ಅವರು ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು