ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Updates: 6.27 ಕೋಟಿ ಜನರಿಗೆ ಸೋಂಕು, 4.33 ಕೋಟಿ ಜನ ಗುಣಮುಖ

Last Updated 29 ನವೆಂಬರ್ 2020, 16:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪ್ರಪಂಚದಾದ್ಯಂತ ಇದುವರೆಗೆ ಒಟ್ಟು 6.27 ಕೋಟಿ (6,27,42,198) ಜನರಿಗೆ ಕೋವಿಡ್‌–19 ತಗುಲಿದೆ. ಇದರಲ್ಲಿ 4.33 ಕೋಟಿ (4,33,52,337) ಸೋಂಕಿತರು ಗುಣಮುಖರಾಗಿದ್ದು, 14.61 ಲಕ್ಷ (14,61,103) ಮಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡೊ ಮೀಟರ್ ವೆಬ್‌ಸೈಟ್‌ ವರದಿ ಮಾಡಿದೆ.

ಜಗತ್ತಿನಲ್ಲಿ ಒಟ್ಟಾರೆ 1.79 ಕೋಟಿ (1,79,28,758) ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 1,05,258 ಜನರ ಸ್ಥಿತಿ ಗಂಭೀರವಾಗಿದೆ.

ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 1.36 ಕೋಟಿಗೂ ಅಧಿಕ ಪ್ರಕರಣಗಳು ದಾಖಲಾಗಿದ್ದು, 2,72,307 ಜನರು ಮೃತಪಟ್ಟಿದ್ದಾರೆ.

ಅಮೆರಿಕದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ 94.06 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಈವರಗೆ 1.36 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಉಳಿದಂತೆ ಬ್ರೆಜಿಲ್‌ನಲ್ಲಿ 62.90 ಲಕ್ಷ, ರಷ್ಯಾದಲ್ಲಿ 22.69 ಲಕ್ಷ, ಫ್ರಾನ್ಸ್‌ನಲ್ಲಿ 20.08 ಲಕ್ಷ, ಸ್ಪೇನ್‌ನಲ್ಲಿ 16.46 ಲಕ್ಷ ಮತ್ತು ಇಂಗ್ಲೆಂಡ್‌ನಲ್ಲಿ 16.05 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಬ್ರೆಜಿಲ್ ಮೂರನೇ ಸ್ಥಾನದಲ್ಲಿದ್ದರೆ, ಸಾವಿನ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಈವರೆಗೆ 1,72,637 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಮೆಕ್ಸಿಕೋದಲ್ಲಿ 1,05,459, ಇಂಗ್ಲೆಂಡ್‌ನಲ್ಲಿ 58,030, ಇಟಲಿಯಲ್ಲಿ 54,363 ಮತ್ತು ಫ್ರಾನ್ಸ್‌ನಲ್ಲಿ 52,127 ಜನರು ಕೋವಿಡ್-19ನಿಂದಾಗಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT