ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಅಮೆರಿಕದಲ್ಲಿ ಕೋವಿಡ್‌ನಿಂದ 4 ಲಕ್ಷ ಮಂದಿ ಸಾವು

Last Updated 19 ಜನವರಿ 2021, 5:10 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಚಳಿಗಾಲದ ಪರಿಣಾಮ ಅಮೆರಿಕದ 30 ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಒಟ್ಟು ಸಾವಿನ ಪ್ರಮಾಣ 4 ಲಕ್ಷಕ್ಕೆ ಸಮೀಪದಲ್ಲಿದೆ.

ಕೋವಿಡ್‌–19 ಪ್ರಕರಣಗಳು ಹೆಚ್ಚಿರುವ ರಾಷ್ಟ್ರಗಳಿಂದ ಪ್ರಯಾಣಕ್ಕೆ ನಿರ್ಬಂಧ ವಿಧಿಸುವಂತೆ ಗವರ್ನರ್‌ಗಳು ಆಗ್ರಹಿಸಿದ್ದಾರೆ. ಬ್ರಿಟನ್‌, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್‌ಗೆ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡದಂತೆ ಕೋರಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಬಹುತೇಕ ರಾಷ್ಟ್ರಗಳಿಗೆ ಹೇರಲಾಗಿರುವ ಸಂಚಾರ ನಿರ್ಬಂಧವನ್ನು ಸಡಿಲಗೊಳಿಸಲು ಮುಂದಾಗಿದ್ದಾರೆ.

ಅಮೆರಿಕಕ್ಕೆ ಪ್ರಯಾಣಿಸುವವರು ಕಡ್ಡಾಯವಾಗಿ ಕೋವಿಡ್‌–19 ನೆಗೆಟಿವ್‌ ವರದಿ ಪಡೆದಿರಬೇಕು ಎಂದು ನಿಯಮ ರೂಪಿಸಿದ್ದರೂ, ಅದಾಗಲೇ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಸ್ವರೂಪದ ಕೊರೊನಾ ವೈರಸ್‌ ಅಮೆರಿಕದಲ್ಲಿ ವ್ಯಾಪಿಸುತ್ತಿದೆ. ಹೊಸ ಸ್ವರೂಪದ ಸೋಂಕು ಶೇ 50ರಷ್ಟು ಅಧಿಕ ಪರಿಣಾಮಕಾರಿಯಾಗಿ ಹರಡಬಲ್ಲದಾಗಿದೆ, ಮಾರ್ಚ್‌ ವೇಳೆಗೆ ಇದು ರಾಷ್ಟ್ರದಾದ್ಯಂತ ವ್ಯಾಪಿಸಬಹುದಾಗಿದೆ ಎಂದು ರೋಗ ನಿಯಂತ್ರಣ ಕೇಂದ್ರವು ಎಚ್ಚರಿಕೆ ನೀಡಿದೆ.

ಜಾನ್‌ ಹಾಪ್ಕಿನ್ಸ್ ಯೂನಿವರ್ಸಿಟಿ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಜಗತ್ತಿನಲ್ಲಿಯೇ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ಅಮೆರಿಕದಲ್ಲಿ ಸೋಮವಾರದ ವರೆಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3,98,000 ತಲುಪಿದೆ. ಕಳೆದ ಎರಡು ವಾರಗಳಿಂದ ಆರಿಜೋನಾದಲ್ಲಿ ನಿತ್ಯ ಸಾವಿಗೀಡಾಗುತ್ತಿರುವವರ ಸಂಖ್ಯೆ 90ರಿಂದ 160ಕ್ಕೆ ಏರಿಕೆಯಾಗಿದೆ. ನ್ಯೂಯಾರ್ಕ್‌ ಒಂದರಲ್ಲಿಯೇ ಸಾವಿನ ಸಂಖ್ಯೆ 40 ಸಾವಿರ ದಾಟಿದೆ.

ಈವರೆಗೆ 3.12 ಡೋಸ್‌ಗಳಷ್ಟು ಕೋವಿಡ್‌ ಲಸಿಕೆ ವಿತರಿಸಲಾಗಿದ್ದು, 1.06 ಕೋಟಿ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.

'ಅತ್ಯಂತ ಕಡಿಮೆ ಆದಾಯವಿರುವ ರಾಷ್ಟ್ರಕ್ಕೆ ಕೇವಲ 25 ಡೋಸ್‌ಗಳಷ್ಟು ಲಸಿಕೆ ನೀಡಲಾಗಿದೆ. 50ಕ್ಕೂ ಹೆಚ್ಚು ಶ್ರೀಮಂತ ರಾಷ್ಟ್ರಗಳಲ್ಲಿ ಸುಮಾರು 3.9 ಕೋಟಿ ಡೋಸ್‌ ಲಸಿಕೆ ವಿತರಣೆಯಾಗಿದ್ದು, ಇದು ನೈತಿಕತೆಯ ವೈಫಲ್ಯ' ಎಂದು ವಿಶ್ವ ಆರೋಗ್ಯ ಸಂಸ್ಥೆ ಬೇಸರ ವ್ಯಕ್ತಪಡಿಸಿದೆ.

ಜಗತ್ತಿನಾದ್ಯಂತ 9.60 ಕೋಟಿ ಪ್ರಕರಣಗಳು

ಜಗತ್ತಿನಾದ್ಯಂತ ಕೋವಿಡ್‌–19 ದೃಢಪಟ್ಟ 9.60 ಕೋಟಿಗೂ ಅಧಿಕ ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ ಈವರೆಗೂ 20.49 ಲಕ್ಷ ಮಂದಿ ಸಾವಿಗೀಡಾಗಿದ್ದು, 6.86 ಕೋಟಿ ಜನರು ಗುಣಮುಖರಾಗಿದ್ದಾರೆ.

2.53 ಕೋಟಿ ಪ್ರಕರಣಗಳು ಸಕ್ರಿಯವಾಗಿದ್ದು, 1.11 ಲಕ್ಷಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರ್ಲ್ಡೊಮೀಟರ್‌ ವೆಬ್‌ಸೈಟ್‌ ವರದಿ ಮಾಡಿದೆ.

ಅಮೆರಿಕದಲ್ಲಿ 2.46 ಕೋಟಿ ಪ್ರಕರಣಗಳ ಪೈಕಿ 4 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರೆ, 1.45 ಕೋಟಿ ಜನರು ಗುಣಮುಖರಾಗಿದ್ದಾರೆ. 96.66 ಲಕ್ಷ ಸಕ್ರಿಯ ಪ್ರಕರಣಗಳಿವೆ. ಬ್ರೆಜಿಲ್‌ನಲ್ಲಿ 8.49 ಲಕ್ಷ, ರಷ್ಯಾದಲ್ಲಿ 5.46 ಲಕ್ಷ, ಯುಕೆ 17.97 ಲಕ್ಷ ಹಾಗೂ ಫ್ರ್ಯಾನ್ಸ್‌ನಲ್ಲಿ 26.33 ಲಕ್ಷ ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT