ಭಾನುವಾರ, ನವೆಂಬರ್ 29, 2020
21 °C

Covid-19 World Update | ಅಮೆರಿಕದಲ್ಲಿ ಹೊಸ ದಾಖಲೆ ಬರೆದ ಕೊರೊನಾ ಪ್ರಕರಣ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಮೆರಿಕದಲ್ಲಿ ಗುರುವಾರ ಒಂದೇ ದಿನ 1,60,000 ಹೊಸ ಪ್ರಕರಣಗಳು ವರದಿಯಾಗಿದೆ. ಅಮೆರಿಕದಲ್ಲಿ ಸೋಂಕಿತರ ಒಟ್ಟು ಸಂಖ್ಯೆ ಒಂದೇ ದಿನ 1,50,000 ದಾಟಿರುವುದು ಇದೇ ಮೊದಲು. ದೇಶದಲ್ಲಿ ಸೋಂಕಿತರ ಸಂಖ್ಯೆ ಒಂದೇ ದಿನ 1 ಲಕ್ಷ ದಾಟಿದ ಒಂದು ವಾರದ ನಂತರ ಅದರ ಪ್ರಮಾಣ ಇಷ್ಟೊಂದು ಹೆಚ್ಚಾಗಿರುವುದು ಹಲವರಲ್ಲಿ ಗಾಬರಿ ತಂದಿದೆ.

ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದು ಅಮೆರಿಕದಲ್ಲಿ ಮತ್ತೊಮ್ಮೆ ಸಂಕಷ್ಟ ಪರಿಸ್ಥಿತಿ ತಂದೊಡ್ಡಿದೆ. ಹಲವು ನಗರಗಳಲ್ಲಿ ಆಸ್ಪತ್ರೆಗಳು ಭರ್ತಿಯಾಗಿದ್ದು, ಸಂಚಾರಿ ಆಸ್ಪತ್ರೆಗಳನ್ನು ಅಣಿಗೊಳಿಸಿ ಸೇವೆಗೆ ನಿಯೋಜಿಸಲಾಗಿದೆ. ನವೆಂಬರ್ 4ರಿಂದ ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಹೊಸ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಕೋವಿಡ್-19ರ ಕಾರಣಕ್ಕೆ ಗುರುವಾರ ಒಂದೇ ದಿನ 67,096 ಮಂದಿ ಅಮೆರಿಕದ ವಿವಿಧೆಡೆ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಪ್ರತಿದಿನ ಸರಾಸರಿ 1000 ಸೋಂಕಿತರು ಸಾವಿಗೀಡಾಗುತ್ತಿದ್ದಾರೆ.

ಜಗತ್ತಿನ ವಿವಿಧ ದೇಶಗಳಲ್ಲಿ ಶುಕ್ರವಾರ ರಾತ್ರಿ 10.20ರ ವೇಳೆಗೆ ಒಟ್ಟು 5,34,05,846 ಸೋಂಕು ಪ್ರಕರಣಗಳು ವರದಿಯಾಗಿದ್ದವು. ಈವರೆಗೆ ಒಟ್ಟು 1,303,992 ಮಂದಿ ಸಾವಿಗೀಡಾಗಿದ್ದಾರೆ. 3,73,72,876 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಅಮೆರಿದಲ್ಲಿ ಅತಿಹೆಚ್ಚು, ಅಂದರೆ ಒಟ್ಟು 1,08,89,066 ಸೋಂಕು ಪ್ರಕರಣಗಳು ವರದಿಯಾಗಿವೆ. ಅಲ್ಲಿ ಈವರೆಗೆ ಸಾವಿಗೀಡಾದವರ ಸಂಖ್ಯೆ 2,48,696. ಒಟ್ಟು 6,72,9,915 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ವಿಶ್ವದಲ್ಲಿ 2ನೇ ಅತಿಹೆಚ್ಚು ಸೋಂಕಿತರಿರುವ ಭಾರತದಲ್ಲಿ ಒಟ್ಟು 87,57,540 ಸೋಂಕು ಪ್ರಕರಣಗಳು ವರದಿಯಾಗಿವೆ. 1,29,056 ಮಂದಿ ಮೃತಪಟ್ಟಿದ್ದಾರೆ. 81,45,134 ಮಂದಿ ಚೇತರಿಸಿಕೊಂಡಿದ್ದಾರೆ.

ಬ್ರೆಜಿಲ್‌ನಲ್ಲಿ 57,83,647 ಸೋಂಕಿತರಿದ್ದಾರೆ. 1,64,332 ಮಂದಿ ಮೃತಪಟ್ಟಿದ್ದಾರೆ. ಫ್ರಾನ್ಸ್, ರಷ್ಯಾ, ಸ್ಪೇನ್, ಬ್ರಿಟನ್‌ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು