ಪ್ಯಾರಿಸ್: ದೇಶದಲ್ಲಿ ಕೊರೊನಾ ವೈರಸ್ ದಿಢೀರ್ ಏರಿರುವ ಹಿನ್ನೆಲೆಯಲ್ಲಿಫ್ರಾನ್ಸ್ ಸರ್ಕಾರವು ಮಂಗಳವಾರ ತುರ್ತು ಸಭೆಗಳನ್ನು ನಡೆಸಿತು. ಅಲ್ಲದೆ, ಹೊಸ ಲಾಕ್ಡೌನ್ ಜಾರಿಯಾಗುವ ಎಚ್ಚರಿಕೆಗಳನ್ನೂ ದೇಶಕ್ಕೆ ನೀಡಿದೆ.

ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರೋನ್ ಅವರು ಪ್ರಧಾನ ಮಂತ್ರಿ ಜೀನ್ ಕ್ಯಾಸ್ಟೆಕ್ಸ್,ಮಂತ್ರಿ, ಸಂಸದರು, ಸಂಘಗಳೊಂದಿಗೆ ಸಮಾಲೋಚನೆ ನಡೆಸಿದರು. ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳ ಕುರಿತು ಚರ್ಚಿಸಿದರು.

ಆಂತರಿಕ ವ್ಯವಹಾರಗಳಸಚಿವ ಜೆರಾಲ್ಡ್ ಡರ್ಮನಿನ್ ರೇಡಿಯೊ ಮೂಲಕ ದೇಶವನ್ನು ಉದ್ದೇಶಿ ಮಾತನಾಡಿದ್ದು,' ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳವ ಸಾಧ್ಯತೆಗಳು ಇವೆ' ಎಂದು ಹೇಳಿದರು. ಈ ಮೂಲಕ ಮೊತ್ತೊಂದು ಹಂತದ ಲಾಕ್ಡೌನ್ನ ಮುನ್ಸೂಚನೆ ನೀಡಿದರು.

ಫ್ರಾನ್ಸ್ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ 75 ಸಾವಿರಕ್ಕೂ ಮಿಗಿಲಾದ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಮಂಗಳವಾರವೂ78,515 ಪ್ರಕರಣಗಳು ವರದಿಯಾಗಿವೆ. ಸದ್ಯ ಫ್ರಾನ್ಸ್ನಲ್ಲಿ11,65,278 ಮಂದಿಗೆ ಸೋಂಕು ತಗುಲಿದೆ.35,018 ಮಂದಿ ಮೃತಪಟ್ಟಿದ್ದಾರೆ.10,18,913 ಸಕ್ರಿಯ ಪ್ರಕರಣಗಳಿವೆ.

ಇನ್ನು, ವಿಶ್ವದಾದ್ಯಂತ ಮಂಗಳವಾರದ ವೇಳೆಗೆ 4,40,17,937 ಮಂದಿಗೆ ಕೋವಿಡ್ ಸೋಂಕು ತಗುಲಿದೆ.

ವರ್ಲ್ಡೋಮೀಟರ್ ಕೋವಿಡ್ ಟ್ರ್ಯಾಕರ್ ವೆಬ್ಸೈಟ್ ಪ್ರಕಾರ, ಜಗತ್ತಿನಲ್ಲಿ ಈವರೆಗೆ 3,23,01,346 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೆ 11,67,785 ಮಂದಿ ಸಾವಿಗೀಡಾಗಿದ್ದಾರೆ.

ವಿಶ್ವದಲ್ಲೇ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಅಲ್ಲಿ ಒಟ್ಟು89,77,593 ಮಂದಿಗೆ ಸೋಂಕು ತಗುಲಿದ್ದರೆ 2,31,324 ಜನ ಈವರೆಗೆ ಮೃತಪಟ್ಟಿದ್ದಾರೆ. ಸದ್ಯ 29,03,604 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ...ನಿರ್ಣಾಯಕ ಘಟ್ಟದಲ್ಲಿ ಕೋವಿಡ್: 2 ತಿಂಗಳು ಎಚ್ಚರ ವಹಿಸಿದಲ್ಲಿ ಸಂಪೂರ್ಣ ನಿಯಂತ್ರಣ

ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಇದುವರೆಗೆ 79,74,963 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ 1,19,823 ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್ನಲ್ಲಿ ಈವರೆಗೆ 54,15,671 ಪ್ರಕರಣಗಳು ಪತ್ತೆಯಾಗಿದ್ದು, 1,57,528 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ 3,88,169 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ರಷ್ಯಾದಲ್ಲಿ ಇದುವರೆಗೆ15,47,774 ಪ್ರಕರಣಗಳು ದೃಢಪಟ್ಟಿದ್ದು, 26,589 ಮಂದಿ ಮೃತಪಟ್ಟಿದ್ದಾರೆ. ಸದ್ಯ 3,62,245 ಸಕ್ರಿಯ ಪ್ರಕರಣಗಳು ಇವೆ. ಪಾಕಿಸ್ತಾನದಲ್ಲಿ ಈವರೆಗೆ 3,29,375 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 6,745 ಮಂದಿ ಕೊನೆಯುಸಿರೆಳೆದಿದ್ದಾರೆ. ಬಾಂಗ್ಲಾದೇಶದಲ್ಲಿ ಇದುವರೆಗೆ 4,01,586 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಆ ಪೈಕಿ 5,838 ಮಂದಿ ಮೃತಪಟ್ಟಿದ್ದಾರೆ. ಸದ್ಯ 77,625 ಸಕ್ರಿಯ ಪ್ರಕರಣಗಳು ಅಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.