Covid-19 World Update: 11 ಕೋಟಿ ಪ್ರಕರಣ, 8.48 ಕೋಟಿ ಸೋಂಕಿತರು ಗುಣಮುಖ

ವಾಷಿಂಗ್ಟನ್: ವಿಶ್ವದಾದ್ಯಂತ 11.00 ಕೋಟಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 8.48 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ.
ವರ್ಲ್ಡೋಮೀಟರ್ ಪ್ರಕಾರ ವಿಶ್ವದಾದ್ಯಂತ 11,00,22,111 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಆ ಪೈಕಿ 24,28,358 ಸೋಂಕಿತರು ಮೃತಪಟ್ಟಿದ್ದಾರೆ. ಈವರೆಗೆ 8,48,37,597 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ವಿಶ್ವದಲ್ಲಿ 2.27 ಕೋಟಿ ಸಕ್ರಿಯ ಪ್ರಕರಣಗಳಿವೆ.
ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ 94,01,811, ಫ್ರಾನ್ಸ್‌ನಲ್ಲಿ 31,62,079, ಇಂಗ್ಲೆಂಡ್‌ನಲ್ಲಿ 17,09,074, ಬ್ರೆಜಿಲ್‌ನಲ್ಲಿ 7,97,807, ಇಟಲಿಯಲ್ಲಿ 3,93,686, ರಷ್ಯಾದಲ್ಲಿ 3,93,681, ಭಾರತದಲ್ಲಿ 1,38,254 ಸಕ್ರಿಯ ಪ್ರಕರಣಗಳಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.