ಮಂಗಳವಾರ, ಅಕ್ಟೋಬರ್ 27, 2020
28 °C

Covid-19 World update| ಜಗತ್ತಿನಾದ್ಯಂತ 87.04 ಲಕ್ಷ ಸಕ್ರಿಯ ಪ್ರಕರಣಗಳು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮಾಸ್ಕೊದ ರೈಲ್ವೆ ನಿಲ್ದಾಣವೊಂದರಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿರುವ ಸಿಬ್ಬಂದಿ

ಮಾಸ್ಕೊ: ರಷ್ಯಾದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌–19 ದೃಢಪಟ್ಟ 15,150 ಹೊಸ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಮಾಸ್ಕೊದಲ್ಲಿ 5,049 ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 13,69,313ಕ್ಕೆ ಏರಿಕೆಯಾಗಿದೆ.

ಇದೇ ಅವಧಿಯಲ್ಲಿ ರಷ್ಯಾದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ 232 ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಈವರೆಗೂ 23,723 ಮಂದಿ ಮೃತಪಟ್ಟಿದ್ದಾರೆ.

ಸ್ಪ್ಯಾನಿಶ್ ಫಾರ್ಮಾ ಕಂಪನಿ ಫಾರ್ಮಾಮಾರ್‌ ಕೋವಿಡ್‌–19 ಚಿಕಿತ್ಸೆಗೆ ನಡೆಸುತ್ತಿರುವ ಕ್ಯಾನ್ಸರ್‌ ಔಷಧಿ 'ಆಪ್ಲಿಡಿನ್‌' ಪ್ರಯೋಗವು ಮೂರನೇ ಹಂತ ತಲುಪಿರುವುದಾಗಿ ಹೇಳಿದೆ. ಕೋವಿಡ್‌–19 ರೋಗಿಗಳಲ್ಲಿ ತನ್ನ ಕ್ಯಾನ್ಸರ್‌ ಡ್ರಗ್‌ ಪರಿಣಾಮಕಾರಿ ಮತ್ತು ಸುರಕ್ಷಿತವಾಗಿದೆ ಫಾರ್ಮಾಮಾರ್‌ ಹೇಳಿದೆ.

ಜಗತ್ತಿನಾದ್ಯಂತ 3.92 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 11.03 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ವರ್ಡೊ ಮೀಟರ್‌ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.

ಈವರೆಗೆ ಜಗತ್ತಿನಾದ್ಯಂತ 2.93 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 87,04,038 ಕೊರೊನಾ ಸೋಂಕು ಪ್ರಕರಣಗಳು ಸಕ್ರಿಯವಾಗಿವೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ ಒಟ್ಟು 82,16,315 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಈವರೆಗೂ 2,22,717 ಮಂದಿ ಸಾವಿಗೀಡಾಗಿದ್ದಾರೆ. 53,20,139 ಜನರು ಈವರೆಗೆ ಚೇತರಿಸಿಕೊಂಡಿದ್ದಾರೆ.

ಸೋಂಕು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 73,70,468 ಪ್ರಕರಣಗಳು, ಬ್ರೆಜಿಲ್‌ನಲ್ಲಿ 51,70,996, ಕೊಲಂಬಿಯಾದಲ್ಲಿ 9,36,982,  ಸ್ಪೇನ್‌ನಲ್ಲಿ 9,72,958 ಮತ್ತು ಅರ್ಜೆಂಟಿನಾದಲ್ಲಿ 9,49,063 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು