ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗೋ: ಜ್ವಾಲಾಮುಖಿ ಸ್ಫೋಟ, ಸತ್ತವರ ಸಂಖ್ಯೆ 32ಕ್ಕೆ ಏರಿಕೆ

Last Updated 25 ಮೇ 2021, 15:01 IST
ಅಕ್ಷರ ಗಾತ್ರ

ಕೀನ್ಯಾಸ: ಪೂರ್ವ ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟದಿಂದ ಸಾವನ್ನಪ್ಪಿದ್ದವರ ಸಂಖ್ಯೆ 32ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜ್ವಾಲಾಮುಖಿ ಸ್ಫೋಟದಿಂದ ಗೋಮಾ ಪ್ರದೇಶದ ಹೊರವಲಯದಲ್ಲಿ ಅನೇಕ ಮನೆಗಳು ನಾಶವಾಗಿದ್ದು, ಕಾಣೆಯಾದವರ ಕುರಿತು ಹಲವರು ಹುಡುಕಾಟ ನಡೆಸಿದ್ದಾರೆ.

ನೈರಗೊಂಗೊ ಪರ್ವತವು ಶನಿವಾರ ಕೆಂಪು ಬಣ್ಣಕ್ಕೆ ತಿರುಗಿತ್ತು. ನಂತರ ಜ್ವಾಲಾಮುಖಿ ಸ್ಫೋಟಗೊಂಡು ಇದರಲ್ಲಿನ ಲಾವಾರಸವು ಪರ್ವತದ ಬುಡದಲ್ಲಿರುವ ಅನೇಕ ಹಳ್ಳಿಗಳಿಗೆ ಹರಡಿತು. ಲಾವಾರಸದಿಂದಾಗಿ 500ಕ್ಕೂ ಹೆಚ್ಚುಮನೆಗಳು ನಾಶವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರದ ವೇಳೆಗೆ ಮೃತಪಟ್ಟವರ ಸಂಖ್ಯೆ 22ರಿಂದ 32ಕ್ಕೆ ಏರಿದೆ. ಲಾವಾರಸದಿಂದ ತಪ್ಪಿಸಿಕೊಳ್ಳುವಾಗ 12ಕ್ಕೂ ಹೆಚ್ಚು ಜನರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹಲವರು ಮನೆಗಳಲ್ಲಿಯೇ ಸಾವನ್ನಪ್ಪಿದ್ದಾರೆ. ಕೆಲವರು ವಿಷಕಾರಿ ಅನಿಲ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಉತ್ತರ ಕಿವು ಪ್ರಾಂತ್ಯದ ನಾಗರಿಕ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಜೋಸೆಫ್ ಮಕುಂಡಿ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT