ಭಾನುವಾರ, ಮೇ 22, 2022
21 °C
ಇಸ್ರೇಲ್‌ನಲ್ಲಿ ನಡೆದ ಸಂಶೋಧನೆಯಿಂದ ಹೊರಬಿದ್ದ ಮಾಹಿತಿ

ಡೆಲ್ಟಾ ರೂಪಾಂತರ ತಳಿಯಿಂದ ಮತ್ತೊಂದು ಕೋವಿಡ್‌ ಅಲೆ?

ಪಿಟಿಐ Updated:

ಅಕ್ಷರ ಗಾತ್ರ : | |

ಜೆರುಸಲೇಮ್‌: ಮುಂದಿನ ಎರಡು ತಿಂಗಳಲ್ಲಿ ಓಮೈಕ್ರಾನ್‌ ಉಪತಳಿಗಳು ಸ್ವತಃ ನಾಶವಾಗಬಹುದು, ಇಲ್ಲವೇ ಈ ಬೇಸಿಗೆಯಲ್ಲಿ ಮತ್ತೊಂದು ಡೆಲ್ಟಾ ತಳಿ ಅಥವಾ ವಿಭಿನ್ನ ಕೋವಿಡ್‌ ಪಿಡುಗು ಉಲ್ಬಣಗೊಳ್ಳಬಹುದು ಎಂದು ಇಸ್ರೇಲ್‌ನಲ್ಲಿ ನಡೆಸಲಾದ ಮಾದರಿ ಅಧ್ಯಯನವೊಂದು ಹೇಳಿದೆ.

‘ಸೈನ್ಸ್‌ ಆಫ್‌ ದಿ ಟೋಟಲ್‌ ಎನ್ವಿರಾನ್‌ಮೆಂಟ್‌’ ಪತ್ರಿಕೆಯಲ್ಲಿ ಕಳೆದ ವಾರ ಈ ಸಂಶೋಧನಾ ವರದಿ ಪ್ರಕಟವಾಗಿದೆ. ಡೆಲ್ಟಾ ತನ್ನ ಹಿಂದಿನ ರೂಪಾಂತರ ತಳಿಗಳನ್ನು ನಾಶಗೊಳಿಸಿದೆ. ಆದರೆ ಮಾರಣಾಂತಿಕ ಓಮೈಕ್ರಾನ್‌ ತಳಿಯು ಇನ್ನೂ ಮರೆಯಾಗಿಲ್ಲ. ಅದು ಮತ್ತೆ ಕಾಣಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇಸ್ರೇಲ್‌ನ ನೆಗೆವ್‌ನಲ್ಲಿಯ ಬೆನ್‌–ಗುರಿಯನ್‌ ವಿಶ್ವವಿದ್ಯಾಲಯದ (ಬಿಜಿಯು) ಸಂಶೋಧಕರು ಸೂಕ್ಷ್ಮ ರಚನೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇವು ತ್ಯಾಜ್ಯ ನೀರಿನಲ್ಲಿಯ ತಳಿಗಳನ್ನು ಪ್ರತ್ಯೇಕಿಸುತ್ತವೆ. ಪಿಸಿಆರ್‌ ಮತ್ತು ರ‍್ಯಾಪಿಡ್‌ ಪರೀಕ್ಷೆಗಳು ಕಡಿಮೆಯಾದಾಗಲೂ ಕೊರೊನಾ ಸೋಂಕು ಎಲ್ಲಿ ಸಕ್ರಿಯವಾಗಿದೆ ಎಂಬ ಸೂಚನೆ ಇದರಿಂದ ದೊರೆಯುತ್ತದೆ. 

ಸಂಶೋಧಕರು 2021ರ ಡಿಸೆಂಬರ್ ನಿಂದ 2022ರ ಜನವರಿ ವರೆಗೆ ಇಸ್ರೇಲ್‌ನ ಬೀರ್-ಶೇವಾ ನಗರದಲ್ಲಿ ಒಳಚರಂಡಿಯನ್ನು ಪರಿಶೀಲನೆ ನಡೆಸಿದರು. ಓಮೈಕ್ರಾನ್ ಮತ್ತು ಡೆಲ್ಟಾ ರೂಪಾಂತರ ತಳಿಗಳ ನಡುವಿನ ಕ್ರಿಯೆಯನ್ನು ಪತ್ತೆ ಹಚ್ಚಿದರು. ಈ ಅಂಶಗಳ ಮೂಲಕ ಸಂಶೋಧಕರು ಮಾದರಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. 

‘ಈ ಬೇಸಿಗೆಯಲ್ಲಿ ಮತ್ತೊಂದು ಡೆಲ್ಟಾ ಅಥವಾ ಕೊರೊನಾ ಉಪತಳಿಯು ಉಲ್ಬಣಗೊಳ್ಳಬಹುದು ಎಂದು ಸಂಶೋಧನೆಯ ಮಾದರಿ ಸೂಚಿಸುತ್ತದೆ’ ಎಂದು ಬಿಜಿಯುನ ಪ್ರೊಫೆಸರ್ ಏರಿಯಲ್ ಕುಶ್ಮಾರೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. 

ಹೊಸದಾದ ಪ್ರಬಲ ರೂಪಾಂತರ ತಳಿಯು ಕಾಣಿಸಿಕೊಂಡಾಗ ಸ್ವಲ್ಪ ಸಮಯದ ನಂತರ ಅದು ಹಿಂದಿನ ತಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಓದಿ... ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹೊಸ ಅಲೆಯ ಸೂಚಕವಲ್ಲ: ತಜ್ಞರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು