ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಯಿ ದ್ವೀಪದ ಜ್ವಾಲಾಮುಖಿ ಸ್ಫೋಟ: 200 ಅಡಿ ಎತ್ತರಕ್ಕೆ ಚಿಮ್ಮುತ್ತಿರುವ ಲಾವಾ

Last Updated 29 ನವೆಂಬರ್ 2022, 4:45 IST
ಅಕ್ಷರ ಗಾತ್ರ

ಹವಾಯಿ: ಹವಾಯಿ ದ್ವೀಪದ ವಿಶ್ವದ ಅತಿದೊಡ್ಡ ಮೌನಾ ಲೋವಾ ಸಕ್ರಿಯ ಜ್ವಾಲಾಮುಖಿಯು ತನ್ನ ರೌದ್ರಾವತಾರ ಪ್ರದರ್ಶಿಸುತ್ತಿದೆ. 38 ವರ್ಷಗಳಲ್ಲಿ ತನ್ನ ಮೊದಲ ಸ್ಫೋಟದಲ್ಲಿ ಕಿತ್ತಳೆ ಬಣ್ಣದ ಪ್ರಜ್ವಲಿಸುವ ಲಾವಾ ಮತ್ತು ಬೃಹತ್ ಪ್ರಮಾಣದ ಬೂದಿಯನ್ನು ಹೊರಸೂಸುತ್ತಿದೆ.

ಯಾವುದೇ ಕಠಿಣ ಪರಿಸ್ಥಿತಿ ಎದುರಿಸಲು ದ್ವೀಪದ ಜನ ಸಿದ್ಧರಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೌನಾ ಲೋವಾ ಜ್ವಾಲಾಮುಖಿಯ ಸ್ಫೋಟವು ತಕ್ಷಣಕ್ಕೆ ಪಟ್ಟಣಗಳಿಗೆ ಯಾವುದೇ ಹಾನಿ ಮಾಡಿಲ್ಲ. ಆದರೆ, ಈ ಜ್ವಾಲಾಮುಖಿಯು ಮತ್ತಷ್ಟು ಕ್ರಿಯಾತ್ಮಕವಾಗಿರಬಹುದು ಮತ್ತು ಲಾವಾ ಹರಿವಿನ ಸ್ಥಳ ಹಾಗೂ ವೇಗವು ಬದಲಾಗಬಹುದು ಎಂದು ಅಮೆರಿಕದ ಭೂವೈಜ್ಞಾನಿಕ ಸರ್ವೆಯು ಎಚ್ಚರಿಸಿದೆ. ದ್ವೀಪದಲ್ಲಿ2,00,000 ಜನರಿದ್ದಾರೆ.

ಲಾವಾ ಹರಿವು ಜನವಸತಿ ಪ್ರದೇಶಗಳತ್ತ ತಿರುಗಿದರೆ ಸ್ಥಳಾಂತರಕ್ಕೆ ಸಿದ್ಧರಾಗಿರಿ ಎಂದು ಅಧಿಕಾರಿಗಳು ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ದೊಡ್ಡ ಭೂಕಂಪಗಳ ಸರಣಿಯ ನಂತರ ಭಾನುವಾರ ತಡರಾತ್ರಿ ಜ್ವಾಲಾಮುಖಿಯ ಸ್ಫೋಟವು ಪ್ರಾರಂಭವಾಗಿದೆ ಎಂದು ಹವಾಯಿಯ ಜ್ವಾಲಾಮುಖಿ ವೀಕ್ಷಣಾಲಯದ ಪ್ರಭಾರ ವಿಜ್ಞಾನಿ ಕೆನ್ ಹಾನ್ ಹೇಳಿದ್ದಾರೆ.

ಲಾವಾ ಹೊರಹೊಮ್ಮುತ್ತಿರುವ ಪ್ರದೇಶವು (ಜ್ವಾಲಾಮುಖಿಯ ಶಿಖರದ ಕುಳಿ ಮತ್ತು ಜ್ವಾಲಾಮುಖಿಯ ಈಶಾನ್ಯ ಪಾರ್ಶ್ವದ ಉದ್ದಕ್ಕೂ ಇರುವ ದ್ವಾರಗಳು) ಜನವಸತಿ ಪ್ರದೇಶಗಳಿಂದ ದೂರದಲ್ಲಿದೆ.

ಸುಮಾರು 2 ಮೈಲುಗಳಷ್ಟು ಪ್ರದೇಶಗಳಲ್ಲಿ ಮೂರು ಪ್ರತ್ಯೇಕ ಬಿರುಕುಗಳಿಂದ 100 ರಿಂದ 200 ಅಡಿ (30 ರಿಂದ 60 ಮೀಟರ್) ಎತ್ತರಕ್ಕೆ ಲಾವಾದಿಂದ ಚಿಮ್ಮುತ್ತಿದ್ದು, ಅವುಗಳಿಂದ ದೂರವಿರಲು ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ಭೂಮಿಯಿಂದ ಹೊರಬರುತ್ತಿರುವ ಜ್ವಾಲಾಮುಖಿ ಅನಿಲಗಳು, ಅದರಲ್ಲೂ ಸಲ್ಫರ್ ಡೈಆಕ್ಸೈಡ್ ಹಾನಿಕಾರಕವಾದುದ್ದಾಗಿದೆ.

ಸದ್ಯ, ದ್ವೀಪದ ಗಾಳಿಮುಟ್ಟವು ಉತ್ತಮವಾಗಿದೆ. ಆದರೆ, ಅಧಿಕಾರಿಗಳು ಅದನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹವಾಯಿ ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಲಿಬ್ಬಿ ಚಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT